ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ಈ ಒಂದು ನ್ಯಾಯಾಂಗ ಬಂಧನದಲ್ಲಿರುವ ವಿನಯ ಕುಲಕರ್ಣಿ ಜಾಮೀನಿಗಾಗಿ ಅರ್ಜಿಯಲ್ಲಿ ಸಲ್ಲಿಸಿದ್ದರು.ಧಾರವಾಡದ ವಿಶೇಷ ಸಿಬಿಐ ನ್ಯಾಯಾಲಯ ಈಗಾಗಲೇ ವಾದ ವಿವಾದವನ್ನು ಆಲಿಸಿದ್ದು ಅಂತಿಮ ತೀರ್ಪನ್ನು ಇಂದು ಪ್ರಕಟಮಾಡಲಿದೆ.
ಜಿ.ಪಂ ಯೋಗೀಶ್ ಗೌಡ ಕೊಲೆ ಕೇಸನಲ್ಲಿ ಜೈಲಿನಲ್ಲಿರುವ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಗುತ್ತದೆನಾ ಅಥವಾ ನ್ಯಾಯಾಂಗ ಬಂಧನವಾಗುತ್ತದೆನಾ ಎಂಬುದನ್ನು ನ್ಯಾಯಾಧೀಶರು ತೀರ್ಪನ್ನು ಪ್ರಕಟ ಮಾಡಲಿದ್ದಾರೆ. ಮಾಜಿ ಸಚಿವರ ಭವಿಷ್ಯ ಇಂದು ನಿರ್ಧಾರವಾಗಲಿದ್ದು ಭವಿಷ್ಯ ಹೊರಬಿಳಲಿದೆ.
ಬೆಳಿಗ್ಗೆ 11 ಘಂಟೆಗೆ ನ್ಯಾಯಾಧೀಶರು ತೀರ್ಪನ್ನು ಪ್ರಕಟಿಸಲಿದ್ದು ವಿನಯ ಕುಲಕರ್ಣಿ ಅವರಿಗೆ ಜೈಲಾ, ಬೇಲಾ, ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಧಾರವಾಡದ ಸಿಬಿಐನ ವಿಶೇಷ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಲಿದೆ. 11 ಘಂಟೆಗೆ ತೀರ್ಪನ್ನು ನ್ಯಾಯಾಧೀಶರು ಪ್ರಕಟಿಸಲಿದ್ದು ಭಾರಿ ಕೂತುಹಲ ಮೂಡಿಸಿದೆ. ವಿನಯ ಕುಲಕರ್ಣಿ ಅವರಿಗಾಗಿ ಅವರ ಅಭಿಮಾನಿಗಳು ಕಾರ್ಯಕರ್ತರು ಕುಟುಂಬದವರು ನ್ಯಾಯಾಲಯದ ಆದೇಶವನ್ನು ಕಾಯುತ್ತಿದ್ದು ಭವಿಷ್ಯ ಏನಾಗಲಿದೆ ಎಂಬುದಕ್ಕೇ ನ್ಯಾಯಾಲಯದ ತೀರ್ಪುನಿಂದ ತಿಳಿಯಲಿದೆ.