ಧಾರವಾಡ –
ಧಾರವಾಡ ತಾಲ್ಲೂಕಿನ ಅಮ್ಮಿನಭಾವಿ ಸಮಿಪದ ಕಲ್ಲು ಕ್ವಾರಿ ಯಲ್ಲಿ ಮುಳಗಿ ಸಾವನ್ನಪ್ಪಿದ ಮರೇವಾಡ ಗ್ರಾಮದ ರಾಜು ಧಾರವಾಡ (ಕಗದಾಳ) ಅವರ ಮನೆಗೆ ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡರಾಗಿರುವ ತವನಪ್ಪ ಅಷ್ಟಗಿ ಅವರು ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು
ಕರ್ನಾಟಕ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು ಮತ್ತು ವೈಯಕ್ತಿಕ ಐವತ್ತು ಸಾವಿರ ಧನ ಸಹಾಯವನ್ನು ಮಾಡಿ ನೆರವಾದರು.

ಪತ್ನಿ ಯೊಂದಿಗೆ ತೆರಳಿದ ಅವರು ಕೆಲ ಸಮಯ ಕುಟುಂಬ ರವರೊಂದಿಗೆ ಮಾತನಾಡಿ ಆತ್ಮ ಸ್ಥೈರ್ಯ ವನ್ನು ತುಂಬಿದರು ಸರ್ಕಾರ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಮಾಡಬೇಕಾದ ಕಾರ್ಯವನ್ನು ತವನಪ್ಪ ಅಷ್ಟಗಿ ಅವರು ಮಾಡಿ ಮಾದರಿಯಾದರು

ಈ ಒಂದು ಸಂದರ್ಭದಲ್ಲಿ ಕುಶಲ ಕೋರಕೊಪ್ಪ ಚನ್ನಬಸಪ್ಪ ಅಮರಗೋಳ ಗಂಗಪ್ಪ ಗಾಳಿ ಜಗದೀಶ್ ಕುಂದಗೋಳ ಮಹಾಂತೇಶ ಚಂದರಗಿ ನಾಗಪ್ಪ ಯಲಿಗಾರ ಬಸವರಾಜ ಚಂದರಗಿ ಮಲ್ವಪ್ಪ ಸವದತ್ತಿ ಈರಪ್ಪ ಧಾರವಾಡ ಗಂಗಪ್ಪ ಧಾರವಾಡ ಹಾಗೂ ಅನೇಕರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..



