ಧಾರವಾಡ –
ಸ್ಮಾರ್ಟ್ ಸಿಟಿ ಸೇರಿದಂತೆ ಹತ್ತು ಹಲವಾರು ಯೋಜನೆ ಗಳು ಹುಬ್ಬಳ್ಳಿ ಧಾರವಾಡ ಗೆ ಬರುತ್ತಿವೆ ಇನ್ನೂ ಬರತಾ ಇವೆ ಹತ್ತ ಹಲವಾರು ಯೋಜನೆಗಳ ನಡುವೆ ಅವಳಿ ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸ್ತೆಗಳು ಡರ್ಟಿಯಾ ಗಿವೆ ಎನ್ನೊದಕ್ಕೆ ಧಾರವಾಡದ ಹೊಸ ಬಸ್ ನಿಲ್ದಾಣದ ಹಿಂದಿನ ಮುಖ್ಯ ರಸ್ತೆಯೇ ಸಾಕ್ಷಿ.
ಹೊಸ ಬಸ್ ನಿಲ್ದಾಣದಿಂದ ಮೆಹಬೂಬ್ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಒಂದು ಮುಖ್ಯರಸ್ತೆ ಹೆಸರಿಗೆ ಮಾತ್ರ ರಸ್ತೆಯಾಗಿದ್ದು ಇದ್ದು ಇಲ್ಲದಂತಾಗಿದ್ದು ಯಾರಿಗೂ ಈ ಒಂದು ರಸ್ತೆಯ ಪರಸ್ಥಿತಿ ಕಾಣುತ್ತಿಲ್ಲ ಕೇಳುತ್ತಿಲ್ಲ.
ಈ ಒಂದು ರಸ್ತೆಯ ಸಮಸ್ಯೆ ಕುರಿತಂತೆ ಆತ್ಮಾನಂದ ನಗರದ ನಿವಾಸಿಗಳು ಮತ್ತು ಮೆಹಬೂಬ್ ನಗರದ ಹಲವು ನಿವಾಸಿಗಳು ಪಾಲಿಕೆಗೆ ಸಂಬಂಧಪಟ್ಟ ಶಾಸಕರಿಗೆ ಪಾಲಿಕೆ ಯ ಸದಸ್ಯರ ಗಮನಕ್ಕೆ ತಗೆದುಕೊಂಡು ಬಂದಿದ್ದು ಆಯಿತು ಹೇಳಿದ್ದಾಯಿತು.ಯಾರು ಕೂಡಾ ಇಲ್ಲಿನ ನಿವಾಸಿ ಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮೇಲಿಂದ ಮೇಲೆ ಪಾಲಿಕೆಗೆ ದೂರು ನೀಡಿದ್ದಾರೆ ಸಮಸ್ಯೆಯನ್ನು ಗಮನಕ್ಕೆ ತಗೆದುಕೊಂಡು ಬಂದಿದ್ದು ಕೇಳಿದರು ಕೇಳಲಾರದಂತೆ ಕಂಡು ಕಾಣದಂತೆ ಇದ್ದಾರೆ
ಹೀಗಾಗಿ ಸಧ್ಯ ರಸ್ತೆಯನ್ನು ಒಮ್ಮೆ ನೋಡಿದರೆ ನಿಜವಾಗಿ ಯೂ ಇದು ಧಾರವಾಡ ನಗರದಲ್ಲಿನ ರಸ್ತೆ ಎಂಬ ಪ್ರಶ್ನೆ ಕಂಡು ಬರುತ್ತಿದ್ದು ಮಳೆಗಾಲದಲ್ಲಿ ಆ ಕೆಲಸ ಈ ಕೆಲಸ ಮಾಡುವವರಿಗೆ ಯಾರು ಮೂಗುದಾರ ಹಾಕುವವರು ಕೇಳುವವರು ಇಲ್ಲದಂತಾಗಿದ್ದು ಒಬ್ಬರು ಆದ ಮೇಲೆ ಮತ್ತೊಬ್ಬರು ಜೆಸಿಬಿ ತಗೆದುಕೊಂಡು ಬಂದು ತಮಗೆ ಬೇಕಾದಂತೆ ರಸ್ತೆಯನ್ನು ಅಗೆದು ಕೆಲಸ ಮಾಡಿ ಬಿಟ್ಟು ಹೋಗುತ್ತಾರೆ ಇವರಾಗುತ್ತಲೆ ಮತ್ತೊಬ್ಬರು ಬರುತ್ತಾರೆ ಅವರು ಹೀಗೆ ಮಾಡಿ ಮುಖ್ಯ ರಸ್ತೆಯನ್ನು ಕರಾಬ್ ಮಾಡಿದ್ದು ಈ ಒಂದು ವಿಚಾರ ಕುರಿತಂತೆ ನಾಲ್ಕೈದು ಬಾರಿ ಶಾಸಕರಿಗೆ ಪೊಟೊ ಸಮೇತ ಕಳಿಸಿ ಗಮನಕ್ಕೆ ತಗೆದು ಕೊಂಡು ಬಂದರು ಕೂಡಾ ಕೇಳಿ ಕೇಳಿ ಸುಮ್ಮನಾಗಿದ್ದಾರೆ
ವಾಟ್ಸ್ ಆಪ್ ನಲ್ಲಿ ನೋಡಿದ್ದಾರೊ ಇಲ್ಲವೊ ಗೊತ್ತಿಲ್ಲ ಆದರೆ ಸಧ್ಯ ಈ ಒಂದು ರಸ್ತೆಯಲ್ಲಿ ಸುತ್ತಾಡುವವರಂತೂ ಹಿಡಿಶಾಪ ಹಾಕುತ್ತಾ ತಿರುಗಾಡುತ್ತಿದ್ದಾರೆ.ಸಧ್ಯ ಬಿಡುವಿ ಲ್ಲದೇ ಮಳೆಯಾಗುತ್ತಿದ್ದು ಹೀಗಾಗಿ ಇಲ್ಲಿ ಜೀವವನ್ನು ಕೈಯಲ್ಲಿಟ್ಟುಕೊಂಡು ಸಾರ್ವಜನಿಕರು ತಿರುಗಾಡುತ್ತಿದ್ದು ಇನ್ನಾದರೂ ಶಾಸಕರೇ ಸಾರ್ವಜನಿಕರ ನೋವಿಗೆ ಸಮಸ್ಯೆ ಗೆ ಸ್ಪಂದಿಸಿ ಇಲ್ಲವೇ ಮತ್ತೆ ನೋಡಿ ನೋಡಲಾರ ದಂತೆ ಕೇಳಿ ಕೇಳಲಾರದಂತೆ ಮಾಡುತ್ತಿರಾ ನೋಡಿ
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಅಭಿವೃದ್ದಿ ಹರಿಕಾರ ಶಾಸಕರು ಎನಿಸಿಕೊಂಡಿರುವ ನಿಮಗೆ ಇದೇನು ದೊಡ್ಡ ವಿಚಾರವಲ್ಲ
ಇನ್ನೂ ಇತ್ತ ಈಗಾಗ ಲೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈಗಷ್ಟೇ ಮಾಡಿದ ರಸ್ತೆಗಳ ಪರಸ್ಥಿತಿ ಕೂಡಾ ಇದೆ ಆಗಿದ್ದು ರಸ್ತೆಗಳು ಕೂಡಾ ಹಾಳಾಗಿ ಎಲ್ಲೇಂದರಲ್ಲಿ ತೆಗ್ಗುಗಳು ಬಿದ್ದಿದ್ದು ಈ ಒಂದು ವಿಚಾರ ಕುರಿತಂತೆ ಕೂಡಾ ನಿಮ್ಮ ಗಮನಕ್ಕೆ ತಗೆದುಕೊಂಡು ಬಂದಿದ್ದು ಅದ್ಯಾಕೋ ಏನೋ ಯಾವುದಕ್ಕೂ ಸ್ಪಂದಿಸುತ್ತಿಲ್ಲ ದುರ್ದೈವದ ವಿಚಾರ ವಾಗಿದೆ.