ನವದೆಹಲಿ –
ನೇಮಕಾತಿ ವೇಳೆ ಸಲ್ಲಿಸಿದ ಬಯೋಮೆಟ್ರಿಕ್ ಮತ್ತು ಭಾವ ಚಿತ್ರಗಳ ನಡುವೆ ಹೊಂದಾಣಿಕೆಯಾಗದ ಕಾರಣ ಶಿಕ್ಷಣ ನಿರ್ದೇಶನಾಲಯ(ಡಿಒಇ)ಇಲ್ಲಿನ 72 ಮಂದಿ ಸರ್ಕಾರಿ ಶಾಲಾ ಶಿಕ್ಷಕರನ್ನು ವಜಾಗೊಳಿಸಲಾಗಿದೆ.ಹೌದು ಇಲಾಖೆ ಯ ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ.ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ(ಡಿಎಸ್‌ಎಸ್‌ಎಸ್‌ಬಿ) 2018 ರಲ್ಲಿ ನಡೆಸಿದ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಪರವಾಗಿ ಮತ್ತೊಬ್ಬರನ್ನು ಕಳುಹಿಸಿದ್ದಾರೆ ಎಂದು ಡಿಒಇ ಸಮಿತಿ ತೀರ್ಮಾನಿಸಿದ ನಂತರ ಅವರ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗಿದೆ.
ಶಾಲೆಗಳಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿತ್ತು.2021ರ ಆರಂಭದಲ್ಲಿ ಆಯ್ಕೆ ಮಂಡಳಿ ಅವರ ಬಯೋಮೆಟ್ರಿಕ್ ಪರಿಶೀಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.72 ಪುರುಷ ಮತ್ತು ಮಹಿಳೆಯರು ದೆಹಲಿಯ ವಿವಿಧ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.