ಉತ್ತರಪ್ರದೇಶ –
ಉತ್ತರಪ್ರದೇಶದ ಔರೈಯಾ ಜಿಲ್ಲೆಯ ಪ್ರಾಥಮಿಕ ಶಾಲೆ ಯೊಂದರಲ್ಲಿ ಶಿಕ್ಷಕರೊಬ್ಬರು ದಲಿತ ವಿದ್ಯಾರ್ಥಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ ಅಲ್ಲದೇ ಮರುದಿನ ಶಾಲೆ ತೆರೆದಾಗ ಮಗು ಶೌಚಾಲಯದಿಂದ ಹೊರಬಂದು ಮನೆಗೆ ತೆರಳಿ ಕುಟುಂಬಸ್ಥರಿಗೆ ತನ್ನ ಕಷ್ಟ ವನ್ನು ವಿವರಿಸಿದ ಹಿನ್ನಲೆಯಲ್ಲಿ ಶಿಕ್ಷಕರೊಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಹೌದು ಪ್ರಾಥಮಿಕ ಶಾಲೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬನ ನ್ನು ಶಿಕ್ಷಕರು ಸುಮಾರು 18 ಗಂಟೆಗಳ ಕಾಲ ಶೌಚಾಲಯ ದಲ್ಲಿ ಬೀಗ ಹಾಕಿ ಬಂಧಿಸಿದ್ದರಂತೆ ಈ ಒಂದು ಘಟನೆ ಬಿದುನಾ ತಾಲೂಕಿನ ಪಿಪ್ರೌಲಿ ಶಿವ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಪೂರ್ವ ದೂಜೆ ಗ್ರಾಮದ 11 ವರ್ಷದ ವಿದ್ಯಾರ್ಥಿಯು ಈ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು.ಆಗಸ್ಟ್ 5 ರಂದು ತನ್ನ ಮಗ ಶಾಲೆಗೆ ಹೋಗಿದ್ದನು ಮತ್ತು ಶಾಲೆಗೆ ರಜೆ ನೀಡಿದರೂ ಮನೆಗೆ ಹಿಂತಿರುಗಲಿಲ್ಲ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.ರಾತ್ರಿಯಿಡೀ ಊರಿನಲ್ಲಿ ಮತ್ತು ಬಂಧು ಬಳಗದಲ್ಲಿ ವಿಚಾರಿಸಿದರೂ ಮಗನ ಬಗ್ಗೆ ಏನೂ ವಿಷಯ ತಿಳಿಯಲಿಲ್ಲ.ಆಗಸ್ಟ್ 6 ರಂದು ಬೆಳಗ್ಗೆ 8 ಗಂಟೆಗೆ ಶಾಲೆ ತೆರೆಯಲು ಶಿಕ್ಷಕರು ಬಂದರು.ಕೊಠಡಿಗಳ ಜೊತೆಗೆ ಶೌಚಾಲಯದ ಬೀಗವನ್ನೂ ತೆರೆಯಲಾಗಿತ್ತು.ಈ ವೇಳೆ ಮಗ ಶೌಚಾಲಯದಿಂದ ಹೊರಗೆ ಬಂದಿದ್ದಾನೆ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿದ್ದಾರೆ.ರಜೆ ಇದ್ದ ಕಾರಣ ನಾನು ಮನೆಗೆ ಬರುತ್ತಿದ್ದೆ.ಆಗ ಶಿಕ್ಷಕ ವಿಜಯ್ ಕುಶ್ವಾಹ ಅವರು ನನ್ನನ್ನು ತಡೆದು ಮಧ್ಯಾಹ್ನ 2 ಗಂಟೆಗೆ ಶೌಚಾಲ ಯಕ್ಕೆ ತಳ್ಳಿದರು ಮತ್ತು ಹೊರಗಿನಿಂದ ಬಾಗಿಲು ಮುಚ್ಚಿ ದರು.
ಆ ಬಳಿಕ ಶೌಚಾಲಯಕ್ಕೂ ಬೀಗ ಹಾಕಲಾಗಿತ್ತು. ಎಲ್ಲರೂ ಹೊರಟು ಹೋಗಿದ್ದರು.ನಾನು ರಾತ್ರಿಯಿಡೀ ಸಹಾಯ ಕ್ಕಾಗಿ ಕಿರುಚುತ್ತಿದ್ದೆ ಎಂದು ಮಗ ನನ್ನ ಬಳಿ ಹೇಳಿದ್ದಾನೆ ಶಾಲೆಯ ಬಳಿ ಯಾವುದೇ ಮನೆ ಇಲ್ಲ. ಹೀಗಾಗಿ ಮಗನ ಧ್ವನಿ ಯಾರಿಗೂ ಕೇಳಿಸದೇ 18 ಗಂಟೆಗಳ ಕಾಲ ಶೌಚಗೃಹ ದಲ್ಲೇ ಇದ್ದ ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಲಿತ ಮಕ್ಕಳೊಂದಿಗೆ ಶಿಕ್ಷಕರ ವರ್ತನೆ ಮತ್ತು ಶಿಕ್ಷಕರ ಅಭ್ಯಾಸ ಸರಿಯಿಲ್ಲ.ಶಾಲೆಯ ಎಲ್ಲಾ ದಲಿತ ಮಕ್ಕಳೊಂ ದಿಗೆ ಅವರು ಅನುಚಿತವಾಗಿ ವರ್ತಿಸುತ್ತಾರೆ.ಊಟದಲ್ಲಿ ಮಾಡಿದ ರೊಟ್ಟಿಗಳನ್ನು ಬಿಸಾಡುತ್ತಾರೆ.ಊಟದಲ್ಲಿ ಪಲ್ಲೆ ಬಡಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸು ತ್ತಾರೆ ಎಂದು ಬಾಲಕ ಆರೋಪಿಸಿದ್ದಾರೆ.ಈ ಘಟನೆ ಬೆಳಕಿಗೆ ಬಂದ ನಂತ್ರ ಗ್ರಾಮದ ಜನರೊಂದಿಗೆ ಶಾಲೆಗೆ ತಲುಪಿದ ಸಂಬಂಧಿಕರು ಪ್ರತಿಭಟನೆ ಮಾಡಲು ಪ್ರಾರಂಭಿ ಸಿದರು.ಸಂತ್ರಸ್ತ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಶಿಕ್ಷಕನ ವಿರುದ್ಧ ಎಸ್‌ಸಿ-ಎಸ್‌ಟಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.