ಬಳ್ಳಾರಿ – ಸಾಮಾನ್ಯವಾಗಿ ಗ್ರಾಮ ಪಂಚಾಯತಿ ಚುನಾವಣೆ ಬಂದಾಗ, ಗ್ರಾಮದ ಜನರು ಅಭಿವೃದ್ಧಿ ಹೆಸರಲ್ಲಿ ಚುನಾವಣಾ ಬಹಿಷ್ಕಾರ ಹಾಕುವುದು ಸಾಮಾನ್ಯ ಆದ್ರೆ ಇಲ್ಲಿ ಯಾರಾದರೂ ಬೇರೆ ಗ್ರಾಮದ ಅಭ್ಯರ್ಥಿ ಗೆ ಮತ ಹಾಕಿದ್ರೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗುತ್ತೆ.

ಹೌದು ಇಂದಿನ ನಾಗರಿಕ ಸಮಾಜದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮುದ್ಲಾಪುರ ತಾಂಡಾದಲ್ಲಿ.

ಹೌದು ಸೋವೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುದ್ಲಾಪುರ ಹೊಸ ತಾಂಡಾ ಮುದ್ಲಾಪುರ ಸನ್ನ ತಾಂಡಾ ಮುದ್ಲಾಪುರ ಹಳೆ ತಾಂಡದ ಜನರಲ್ಲಿ ಇದೆ.

ಈ ಮೂರು ಗ್ರಾಮಗಳ ನಡುವಲ್ಲಿ ಒಟ್ಟು ಮೂರು ಸದಸ್ಯರು ಇದ್ದಾರೆ. ಆದ್ರೆ ಮುದ್ಲಾಪುರ ಹೊಸ ತಾಂಡಾದ ಜನರೇ ಮೂರು ಜನರನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಹೀಗಾಗಿ ಬೇರೆ ಗ್ರಾಮದ ಜನರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶವೇ ಇಲ್ಲಾ.

ಕಾರಣ ಮುದ್ಲಾಪುರ ಹೋಸತಾಂಡಾದಲ್ಲಿ ಹೆಚ್ಚಿನ ಮತದಾರರು ಇದ್ದಾರೆ (600) ಹೀಗಾಗಿಯೇ ಅವರೇ ಮೂರು ಜನರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮೇಲಾಗಿ ಮುದ್ಲಾಪುರ ಸನ್ನ ತಾಂಡಾ ಹಾಗೂ ಹಳೆ ತಾಂಡಾದಲ್ಲಿ (500) ಮತದಾರರಿದ್ದಾರೆ. ಇದೇ ಕಾರಣಕ್ಕೆ ಬೇರೆ ಗ್ರಾಮದ ಜನರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರೆ. ಅವರಿಗೆ ಮತ ಹಾಕುವಂತಿಲ್ಲಾ ಒಂದು ವೇಳೆ ಬೇರೆಯವರಿಗೆ ಓಟ್ ಹಾಕಿದ್ರೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗುವು.

ಅಲ್ಲದೇ ಈಗಾಗಲೇ ಗ್ರಾಮದ ಜನರಿಗೆ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಅಲ್ಲದೆ ದಂಡ ಸಹ ವಿಧಿಸುತ್ತಾರೆ. ಹೀಗಾಗಿ ಪಕ್ಕದ ಗ್ರಾಮದ ಜನರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.