ತಾರಿಹಾಳ – ಬೆಂಬಲ ಬೆಲೆಯ ಸರ್ಕಾರದ ಹತ್ತಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳಿಬ್ಬರನ್ನು ರೈತರು ಕೂಡಿ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ ಹೊರವಲಯದ ತಾರಿಹಾಳ ಸರ್ಕಾರದ ಹತ್ತಿ ಖರೀದಿ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ.
ಎಂದಿನಂತೆ ಇಂದು ಕೂಡಾ ಬೆಳಿಗ್ಗೆ ಯಿಂದ ರೈತರಿಂದ ಹತ್ತಿ ಯನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಅಧಿಕಾರಿಗಳು ಸಮಯವಾಗಿದೆ ನಾಳೆ ತೆಗೆದುಕೊಳ್ಳುತ್ತವೆ ಎಂದಿದ್ದಾರೆ. ನಾವೆಲ್ಲಾ ದೂರದಿಂದ ಬಂದಿದ್ದು ದಯಮಾಡಿ ತೆಗೆದುಕೊಳ್ಳಿ ಎಂದು ರೈತರು ಹೇಳಿದ್ದಾರೆ.
ಇದಕ್ಕೆ ಒಪ್ಪಂದ ಅಧಿಕಾರಿಗಳು ತಮ್ಮ ಮೊಂಡತನ ಪ್ರದರ್ಶನ ಮಾಡಿದ್ದಾರಂತೆ. ಇದರಿಂದ ಬೇಸತ್ತ ರೈತರು ಕಚೇರಿಯಲ್ಲಿದ್ದ ಇಬ್ಬರು ಅಧಿಕಾರಿಗಳನ್ನು ಒಳಗಡೆಯೇ ಕೂಡಿ ಹಾಕಿದ್ದಾರೆ.ಅಧಿಕಾರಿಗಳಾದ ಪ್ರದೀಪ ಮತ್ತು ಪ್ರಕಾಶ್ ಅಧಿಕಾರಿಗಳನ್ನು ಒಳಗಡೆ ಹಾಕಿದ ರೈತರು ಬೀಗ ಹಾಕಿದ್ದಾರೆ. ಹುಬ್ಬಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಭಾಗದ ರೈತರ ಇಪ್ಪತ್ತಕ್ಕೂ ಹೆಚ್ಚು ಟ್ರಾಕ್ಟರ್ ಗಳಿದ್ದು ಖರೀದಿ ಮಾಡುವಂತೆ ರೈತರು ಪಟ್ಟು ಹಿಡಿದಿದ್ದಾರೆ.