ಆಸ್ಪತ್ರೆಯಿಂದ ಸಂತೋಷ ಡಿಸ್ಚಾರ್ಜ್ -ಊಟದಲ್ಲಿ ವ್ಯತ್ಯಾಸವಾಗಿದೆ ಎಂದ ಸಿಎಮ್ ರಾಜಕೀಯ ಕಾರ್ಯದರ್ಶಿ

Suddi Sante Desk

ಬೆಂಗಳೂರು –

ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಬೆಂಗಳೂರಿನ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಸಂತೋಷ್ ಇಂದು ಮನೆಗೆ ತೆರಳಿದರು. ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಂತೆ ಡಿಸ್ಚಾರ್ಜ್ ಆದ ಬಳಿಕ‌ ಮಾತನಾಡಿದ ಸಂತೋಷ್ ಅವರು 3 ದಿನದ ಹಿಂದೆ ಖಾಸಗಿ ಕಾರ್ಯಕ್ರಮ ಹೋಗಿದ್ದೆ ಊಟದಲ್ಲಿ ವ್ಯತ್ಯಾಸವಾಗಿ ಅಜೀರ್ಣವಾಗಿತ್ತು.ಅದಕ್ಕೆ ಮಾತ್ರೆ ತಗೊಳುವಾಗ ಯಾವುದನ್ನ ತಗೋಬೇಕೊ, ಅದನ್ನ ತಗೊಂಡಿಲ್ಲ ಮಿಸ್ ಆಗಿ ಬೇರೆ ಮಾತ್ರೆ ತಗೊಂಡು ಡೋಸೆಜ್ ಹೆಚ್ಚಾಗಿತ್ತು ಅದನ್ನ ನನ್ನ ಪತ್ನಿ ನೋಡಿ ಗಾಬರಿಗೊಂಡರು ಎಂದರು.

ಇನ್ನೂ ತಕ್ಷಣ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ರು ಇದೊಂದು ಆಕಸ್ಮಿಕ,ಅಚಾತುರ್ಯ ಅಷ್ಟು ಬಿಟ್ಟರೇ ಬೇರೇನೂ ಇಲ್ಲ.ಇದು ಉದ್ದೇಶಪೂರ್ವಕವಾಗಿ ಆಗಿರುವಂತದ್ದಲ್ಲ ರಾಜಕೀಯ ಒತ್ತಡ ಯಾವಾಗಲೂ ಇರತ್ತೆ ಅದು ಇಲ್ಲದೇ ಇರೋ‌ ದಿನಗಳೇ ಇಲ್ಲ.ಒತ್ತಡಕ್ಕೆ ಮಾತ್ರೆ ತಗೊಳೊ ಸ್ವಭಾವ ನಂದಲ್ಲ ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆ ತಗೊತಿದ್ದೆ 02 MG ತಗೊತಿದ್ದೆ ಅದು ವ್ಯತ್ಯಾಸವಾಗಿ ಹೆಚ್ಚಿನ ಡೋಸೆಜ್ ತಗೊಂಡೆ ಎಂದರು.

ಇನ್ನೂ ಅರ್ಧ ಮಾತ್ರೆ ತಗೊಬೇಕಿತ್ತು,ಪೂರ್ತಿ ತಗೊಂಡಿದ್ದಕ್ಕೆ ಹೀಗಾಗಿದೆ.ರಾಜೀನಾಮೆ ವಿಚಾರವಾಗಿ ಯಾರ ಮೇಲೆ ಒತ್ತಡ ಇತ್ತು ಅನ್ನೋದು ಗೊತ್ತಿಲ್ಲ.ನನ್ನನು ಯಾರು ರಾಜೀನಾಮೆ ಕೇಳಿಲ್ ನನ್ನನ್ನ ಯಾಕ್ರಿ,ಯಾರು ರಾಜೀನಾಮೆ ಕೇಳ್ತಾರೆ ಎಂದು ಪ್ರಶ್ನಿಸಿದರು.ಇನ್ನೂ ಡಿಕೆಶಿ ಸಿಡಿ ವಿಚಾರ ಪ್ರಸ್ತಾಪಿಸಿ ಸಂತೋಷ್ ಮಾತನಾಡಿ ಡಿಕೆಶಿ ಇದೇ ಮೊದಲು ಮಾತಾಡ್ತಿರೋದಲ್ಲ ಅವರ ಮನೆ ಮೇಲೆ ಸಿಬಿಐ,ಐಟಿ‌ ರೇಡ್ ಆದಾಗಲೂ ಡೈರಿ ವಿಚಾರ ಪ್ರಸ್ತಾಪ ಮಾಡಿದ್ರು ನನ್ನ ಬಳಿ ಡೈರಿ ಇದೆ ಯಾಕೆ ತನಿಖೆ ಮಾಡ್ತಿಲ್ಲ ಅಂದಿದ್ರು ಇದು ಅವರಿಗೆ ಸ್ವಭಾಗ ಆಗಿಹೋಗಿದೆ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಸೋತಿದ್ದಾರೆ ಆರ್.ಆರ್.ನಗರ ಸೋಲು ಡಿಕೆಶಿಗೆ ಹಾಗೆ ಮಾಡಿದೆ ಹಲವಾರು ಬಾರಿ ಮಂತ್ರಿ ಆಗಿದ್ದಾರೆ.ರಾಜ್ಯಾಧ್ಯಕ್ಷರಾಗಿದ್ದಾರೆ 75-80 ನೇ ಇಸವಿಯಂತೆ ಈಗ ಮಾತನಾಡಬಾರದು ರಾಜಕೀಯ ಹೇಳಿಕೆ‌ ನೀಡಬೇಕೆಂದರೆ ಸಿದ್ದರಾಮಯ್ಯ ನೋಡಿ ಕಲಿಬೇಕು ಅವರು ನಡೆದುಕೊಳ್ಳುವಂತೆ ನಡೆದುಕೊಂಡರೆ ಗೌರವ ಇರುತ್ತೆ ಕೇಂದ್ರ ಸಂಸ್ಥೆ ತನಿಖೆ‌ ಮಾಡಿದಾಗ ಈ ರೀತಿ ಡಿಕೆಶಿ ತಿರುಗಿಸುವ ಕೆಲಸ ಮಾಡುತ್ತಾರೆ ಯಡಿಯೂರಪ್ಪ ಬಗ್ಗೆ ಮಾತಾಡುವಾಗ ಹತ್ತಾರು ಬಾರಿ ಯೋಚಿಸಿ ಡಿಕೆಶಿ ಮಾತಾಡಬೇಕು ಎಂದರು.

ಯಡಿಯೂರಪ್ಪ ಬಗ್ಗೆ ಮಾತಾಡೋದಂದ್ರೆ ಇನ್ನೂರು,ಮೂನ್ನೂರ ಜನರನ್ನ ಮನೆ ಹತ್ರ ಕರೆಸಿ ದೊಂಬರಾಟ ಮಾಡಿದಂತಲ್ಲ ಯಡಿಯೂರಪ್ಪ ಬಗ್ಗೆ ಇನ್ನೊಮ್ಮೆ ಹಗುರವಾಗಿ ಮಾತಾಡಿದ್ರೆ ಸರಿ ಇರಲ್ಲ ನಾನು ಕರೆ ಕೊಟ್ಟರೆ ಬಿಎಸ್ ವೈ ಪರ ಲಕ್ಷಾಂತರ ಜನ ಅವರ ಪರವಾಗಿ ನಿಲ್ತಾರೆ ಅವರ ಬಗ್ಗೆ ಮಾತಾಡೋದು ಮುಟ್ಟಾಳ ತನ ಕಾಂಗ್ರೆಸ್ ಹಿರಿಯ ನಾಯಕರು ಅವರನ್ನ ಯಾವುದಾದರು ಆಸ್ಪತ್ರೆಗೆ ಸೇರಿಸಿ ಟ್ರೀಟ್ಮೆಂಟ್ ಕೊಡಿಸಬೇಕು ನಾನು ಯಾವುದೇ ಕಾರಣಕ್ಕೂ ಖಿನ್ನ ಮಾನಸಿಕತೆ ವ್ಯಕ್ತಿಯಲ್ಲ ನಾನು‌ ಯಾರ ಗರಡಿಯಲ್ಲಿ ಬೆಳೆದಿದ್ದಿನಿ ಅನ್ನೋದು ರಾಜ್ಯದ ಜನತೆಗೆ ಗೊತ್ತಿದೆ ಎರಡು ದಿನ ನಂತರ ಸಿಎಂ ಬಿಎಸ್ ವೈ ಭೇಟಿಯಾಗ್ತೇನೆಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.