ಬೆಂಗಳೂರು – ರಾಜ್ಯದಲ್ಲಿನ ಪೊಲೀಸ ಪೊಲೀಸ್ ಇಲಾಖೆಯಲ್ಲಿ ಏನಾಗುತ್ತಿದೇಯೋ ಗೊತ್ತೆ ಆಗುತ್ತಿಲ್ಲಾ. ಸಾರ್ವಜನಿಕರಿಗೆ ಧೈರ್ಯ ಹೇಳಬೇಕಾಗಿದ್ದ ಪೊಲೀಸ್ ಅಧಿಕಾರಿಗಳೇ ಈಗ ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೌದು ಕಳೆದ ದಿನವಷ್ಟೇ ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಆ ಘಟನೆಯು ಮಾಸುವ ಮುನ್ನವೇ ಈಗ ಮತ್ತಿಬ್ಬರು ಪೊಲೀಸ್ ದಂಪತಿಗಳು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಇವರಿಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಪೊಲೀಸ ಪೇದೆಗಳಾದ ಹೆಚ್ ಸಿ ಸುರೇಶ ಹಾಗೂ ಶೀಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಚ್ ಸಿ ಸುರೇಶ ಮೂಲತಃ ಕೊಲಾರ ಜಿಲ್ಲೆಯವರಾಗಿದ್ದು, ಶೀಲಾ ಚಿಕ್ಕಮಂಗಳೂರಿನವರಾಗಿದ್ದಾರೆ. ಈ ಇಬ್ಬರು ಕಳೆದ ಹತ್ತು ವರ್ಷಗಳಿಂದ ಪ್ರೀತಿಸಿ ಇಷ್ಟ ಪಟ್ಟು ವಿವಾಹವಾಗಿದ್ದರು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲಾ.
ಸುರೇಶ ಪತ್ನಿ ಶೀಲಾ ಪೊಲೀಸ್ ಪೇದೆಯಾಗಿ ಕೊತ್ತನೂರು ಠಾಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇನ್ನೂ ಶೀಲಾ ಪತಿ ಸುರೇಶ ಸಂಪಿಗೆಹಳ್ಳಿ ಎಸಿಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೂ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಕೊತ್ತನೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯಾತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮಾಡತಾ ಇದ್ದಾರೆ.