ಮೈಮೇಲೆ ದೇವರು ಬಂದಂತೆ ನಟನೆ ಮಾಡುತ್ತಿದ್ದವನ – ರಹಸ್ಯ ಬಯಲು ಮಾಡಿದ ಸಾರ್ವಜನಿಕರು

Suddi Sante Desk

ಕೊಡಗು –

ಮಾಟ ಮಂತ್ರದ ಹೆಸರಲ್ಲಿ ಜನತೆಗೆ ವಂಚನೆ ಮಾಡುತ್ತಿದ್ದ ವಂಚಕನ ಪುರಾಣವನ್ನು ಬಯಲು ಮಾಡಿದ ಘಟನೆ ಕೊಡಗಿನಲ್ಲಿ ನಡೆದಿದೆ. ಮೈಮೇಲೆ ದೇವರು ಬಂದಿದೆ‌ ಎಂದು ಜನತೆಗೆ ಮೋಸ ಮಾಡುತ್ತಿದ್ದ ಕಳ್ಳ ವಂಚಕನ ಪುರಾಣವನ್ನು ಸಾರ್ವಜನಿಕರೇ ಬಯಲು ಮಾಡಿದ್ದಾರೆ.

ವಂಚಕ ರವಿ

ದೇವರು‌ ಬಂದ ವ್ಯಕ್ತಿಯ ರಹಸ್ಯವನ್ನು ಬೆಳ್ಳೂರು ಗ್ರಾಮಸ್ಥರು ಬಯಲು ಮಾಡಿದ್ದಾರೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಲ್ಯಮುಂಡೂರು ಗ್ರಾಮದ ರವಿ ಎಂಬಾತನೇ ಕಳ್ಳ ವಂಚನಕನಾಗಿದ್ದಾನೆ. ಕೊಡಗಿನ ಸುಪ್ರಸಿದ್ದ ಐತಿಹಾಸಿಕ ವೆಂಕಟರಮಣ ದೇವರ ಹೆಸರಿನಲ್ಲಿ ರವಿ ಎಂಬುವರು ಮೈಮೇಲೆ ದೇವರು ಬಂದಂತೆ ನಟನೆ ಮಾಡುತ್ತಿದ್ದರು. ಕೆಲ ಸಮಸ್ಯೆಗಳ ಕುರಿತಂತೆ ಇವರ ಬಳಿ ಯಾರಾದರೂ ಬಂದರೆ ನಿಮ್ಮ ಸಮಸ್ಯೆಗೆ ಹೀಗೆ ಹಾಗೇ ಮಾಡಬೇಕು ಎಂದು ಹೇಳಿ ಕೊನೆಗೆ ಗುಂಡಿ ತೆಗೆದು ತಾನೇ ಅದರಲ್ಲಿ ತಗಡನ್ನು ಹಾಕಿ ನಂಬುವ ಹಾಗೇ ಮಾಡುತ್ತಿದ್ದ.ಈ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ರಹಸ್ಯವನ್ನು ಬಯಲು ಮಾಡಿದ್ದಾರೆ ಸಾರ್ವಜನಿಕರು. ಹುಲಿಕಲ್ ನಟರಾಜ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರು ವೆಂಕಟರಮಣ ಎಂಬುವರ ನಕಲಿ ಪುರಾಣವನ್ನು ಚಿತ್ರೀಕರಣದ ಮೂಲಕ ಬಯಲು ಮಾಡಿದ್ದಾರೆ. ಇದೇಲ್ಲ ಆಗುತ್ತಿದ್ದಂತೆ ಕೊನೆಗೆ ಮೈಮೇಲೆ ದೇವರು ಬಂದಂತೆ ನಟನೆ ಮಾಡಿ ಜನರನ್ನು ವಂಚನೆ ಮಾಡುತ್ತಿದ್ದ ವೆಂಕಟರಮಣ ತಪ್ಪನ್ನು ತಾನೇ ತಪ್ಪೊಪ್ಪಿಕೊಂಡಿದ್ದಾರೆ. ಇನ್ನೂ ವಂಚನೆ ದೇವರು ಬಂದಂತೆ ನಟಿಸಿ ಜನತೆಗೆ ವಂಚಿಸುತ್ತಿದ್ದ ಮಹಾಶಯ ವೆಂಕಟರಮಣ ದೇವರು ತಮ್ಮ ಮೈಮೇಲೆ ಬಂದಂತೆ ನಟನೆ ಮಾಡಿ ಸಾರ್ವಜನಿಕರಿಂದ ಸಾವಿರಾರು ರೂಪಾಯಿ ಹಣ ಪಡೆದು ಜನತೆಗೆ ಮೋಸ ಮಾಡುತ್ತಿದ್ದ.

ಹೀಗೆ ಮೋಸ ಮಾಡುತ್ತಿದ್ದವನ ಮೋಸದ ಮುಖವಾಡವನ್ನು ಈಗ ಸಾರ್ವಜನಿಕರೇ ಬಯಲು ಮಾಡಿದ್ದಾರೆ. ಏನೇ ಆಗಲಿ ನೀವು ಕೂಡಾ ಯಾರನ್ನಾದರೂ ಹೀಗೆ ದೇವರ ಹೆಸರಿನಲ್ಲಿ ಮಾಟ ಮಂತ್ರ ಮಾಡ್ತಾರೆ ಎಂದರೆ ಮೊದಲು ಅವರನ್ನು ಒಮ್ಮೇ ವಿಚಾರ ಮಾಡಿ ನೋಡಿ ನಂತರ ಹೋಗಿ ಇದು ನಿಮ್ಮ ಸುದ್ದಿ ಸಂತೆ ವೇಬ್ ನ್ಯೂಸ್ ನ ಕಳಕಳಿ ಕಾಳಜಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.