ಎಸಿಬಿ ದಾಳಿ – ಕಿಟಕಿಯಿಂದ ಹಣ ಎಸೆದ್ರಾ ಸಿಬ್ಬಂದಿ

Suddi Sante Desk

ಬೆಂಗಳೂರು –

ಎಸಿಬಿ ಅಧಿಕಾರಿಗಳು ಆರ್‌ಟಿಒ ಕಚೇರಿ ಮೇಲೆ ದಾಳಿಯಾಗುತ್ತಿದ್ದಂತೆ ಕಚೇರಿಯಿಂದ ಹಣವನ್ನು ಕಿಟಕಿಯಿಂದ ಹೊರಗೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಆರ್‌ಟಿಒ ಕಚೇರಿ ಮೇಲೆ ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇತ್ತ ದಾಳಿಯಾಗುತ್ತಿದ್ದಂತೆ ಅತ್ತ ಕಿಟಕಿಯಿಂದ ಕಚೇರಿಯಲ್ಲಿದ್ದವರು ಹಣವನ್ನು ಹೊರಕ್ಕೆ ಹಣ ಎಸೆದಿದ್ದಾರೆ.ಇನ್ನೂ ಸಿಕ್ಕ 5.96 ಲಕ್ಷ ನಗದನ್ನು ಅಧಿಕಾರಿಗಳು ವಶಕ್ಕೆ ತಗೆದುಕೊಂಡಿದ್ದಾರೆ.ವಾಹನ ನೋಂದಣಿ, ಚಾಲನಾ ಪರವಾನಗಿ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಖಚಿತ ಮಾಹಿತಿ ಆಧರಿಸಿ ಕೋರಮಂಗಲದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಮೇಲೆ ನಿನ್ನೆ ಸಂಜೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ಮಾಡಿ ಕೈಗೆ 5.96 ಲಕ್ಷ ನಗದು ಹಣ ಸಿಕ್ಕಿದ್ದು ವಶಪಡಿಸಿಕೊಂಡಿದ್ದಾರೆ.ದಾಖಲೆಗಳ ಕೊಠಡಿ, ಅಧಿಕಾರಿಗಳ ಕೊಠಡಿ, ಕಚೇರಿ ಪಕ್ಕದ ಖಾಸಗಿ ಅಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಲಂಚದ ಹಣವನ್ನು ಬಚ್ಚಿಟ್ಟಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ. ಆರ್‌ಟಿಒ ಕಚೇರಿಯ ಒಳಗಡೆ ಇದ್ದ ನಾಲ್ವರು ಖಾಸಗಿ ಮಧ್ಯವರ್ತಿಗಳು ಹಾಗೂ ಅಕ್ರಮದಲ್ಲಿ ಶಾಮೀಲಾದ ಶಂಕೆ ಇರುವ ಇಬ್ಬರು ಅಧಿಕಾರಿಗಳನ್ನು ಎಸಿಬಿ ತಂಡ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದೆ.ಆರ್‌ಟಿಒ ಕಚೇರಿಯಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.

ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದಲ್ಲಿನ ಅಧಿಕಾರಿಗಳ ತಂಡ ದಾಳಿ ಮಾಡಿ ಶೋಧ ನಡೆಸಿತು. ಕಾರ್ಯಾಚರಣೆಯಲ್ಲಿ 5.96 ಲಕ್ಷ ನಗದು ಪತ್ತೆಯಾಗಿದೆ. ಖಾಸಗಿ ಮಧ್ಯವರ್ತಿಗಳು ಸರ್ಕಾರಿ ಅಧಿಕಾರಿಗಳ ಪರವಾಗಿ ಕೆಲಸ ಮಾಡುತ್ತಿದ್ದು ಕಂಡುಬಂದಿದೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯವರ್ತಿಗಳ ಬಳಿ ದಾಖಲೆ –

ಆರ್‌ಟಿಒ ಕಚೇರಿ ಇರುವ ಬಿಡಿಎ ಕಾಂಪ್ಲೆಕ್ಸ್‌ ನಲ್ಲೇ ಇದ್ದ ಖಾಸಗಿ ಮಧ್ಯವರ್ತಿಯೊಬ್ಬನ ಅಂಗಡಿಯಲ್ಲಿ ವಾಹನ ನೋಂದಣಿ, ಚಾಲನಾ ಪರವಾನಗಿಯ ಮೂಲ ದಾಖಲೆಗಳು ಪತ್ತೆಯಾಗಿವೆ. ವಿತರಣೆಗೆ ಸಿದ್ಧವಾಗಿದ್ದ ದಾಖಲೆಗಳನ್ನು ಲಂಚದ ಹಣ ಸಂಗ್ರಹಿಸುವುದಾಗಿ ಮಧ್ಯವರ್ತಿ ಬಳಿ ನೀಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಕಿಟಕಿಯಲ್ಲಿ ಹಣ ಎಸೆದರು-

ಆರ್‌ಟಿಒ ಕಚೇರಿಯಲ್ಲಿ ಬ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಎಸಿಬಿ ಅಧಿಕಾರಿಗಳ ತಂಡ ಕಚೇರಿಗೆ ಕಾಲಿಡುತ್ತಿದ್ದಂತೆ ಇತ್ತ ಕಚೇರಿಯ ಕೆಲವು ಸಿಬ್ಬಂದಿಗಳು ತಮ್ಮ ಬಳಿ ಇದ್ದ ಗರಿ ಗರಿಯಾದ ನೋಟುಗಳ ಕಟ್ಟನ್ನು ಕಿಟಕಿಯಿಂದ ಎಸೆದಿದ್ದಾರೆ. ದಾಳಿ ನಡೆಸಿರುವುದು ಗೊತ್ತಾಗುತ್ತಿದ್ದಂತೆಯೇ ಆರ್‌ಟಿಒ ಕಚೇರಿಯ ಕೆಲವು ಸಿಬ್ಬಂದಿ ಕಿಟಕಿಗಳಿಂದ ನೋಟುಗಳ ಕಂತೆಗಳನ್ನು ಹೊರಕ್ಕೆ ಎಸೆದಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಕಿಟಕಿಯಿಂದ ಬೀಳುತ್ತಿದ್ದ ಬಿದ್ದಿದ್ದ ಈ ಹಣವನ್ನು ತೆಗೆದುಕೊಂಡು ಎಸ್ಕೇಫ್ ಆಗಿದ್ದಾರೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.ಒಟ್ಟಾರೆ ಬ್ರಹ್ಮಾಂಡ ಬ್ರಷ್ಟಾಚಾರ ವಾಗುತ್ತದೆ ಎಂಬುದಕ್ಕೇ ಕೋರಮಂಗಲದ ಆರ್‌ಟಿಒ ಕಚೇರಿ ಮತ್ತೊಮ್ಮೆ ಸಾಕ್ಷಿಯಾಗಿದ್ದು ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡು ಕೆಲವರನ್ನು ವಶಕ್ಕೇ ತಗೆದುಕೊಂಡು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.