ಹುಬ್ಬಳ್ಳಿ-
ಡಿಸೆಂಬರ್ 26 ರಿಂದ ಜನವರಿ 15 ರವರೆಗೆ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ,ಹಾವೇರಿ ಮತ್ತು ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿನ ಪದವಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳು ಜರುಗಲಿವೆ. ಕೋವಿಡ್ -19 ತುತ್ತಾಗಿ ಪರೀಕ್ಷೆಗೆ

ಹಾಜರಾಗದ ಹಾಗೂ 2, 4 ಮತ್ತು 6 ನೇ ಸೆಮೆಸ್ಟರ್ ವಿದ್ಯಾರ್ಥಿಗಳು ಹಾಗೂ 5 ಮತ್ತು 6 ಸೆಮಿಸ್ಟರ್ ನಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ತೆಗದುಕೊಳ್ಳಬಹದು ಎಂದು ಕುಲಸಚಿವ ಪ್ರೊ.ರವೀಂದ್ರನಾಥ ಎನ್. ಕದಮ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ www.kud.ac.in ವೆಬ್ ಸೈಟ್ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.