ಸಮವಸ್ತ್ರದ ಮೇಲೆ ಪುಲ್ ಟೈಟ್ ನಡು ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ತರಾಟೆ ತಗೆದುಕೊಂಡ ಸಾರ್ವಜನಿಕರು – ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್

Suddi Sante Desk

ತುಮಕೂರು –

ಸಾಮಾನ್ಯವಾಗಿ ಸಾರ್ವಜನಿಕರು ಕುಡಿದು ವಾಹನಗಳನ್ನು ಚಲಾವಣೆ ಮಾಡಿದ್ರೆ ಪೊಲೀಸರು ಕೇಳ್ತಾರೆ ನೋಡ್ತಾರೆ. ಕೊನೆಗೆ ಬಾಯಲ್ಲೊಂದು ಮಶೀನ್ ಹಾಕಿ ಪರೀಕ್ಷೆನೂ ಮಾಡ್ತಾರೆ. ಆದರೆ ಪೊಲೀಸರೇ ಕಂಠಪೂರ್ತಿ ಕುಡಿದರೆ ಅವರನ್ನು ಕೇಳೊರು ಯಾರು. ಹೌದು ಸಮವಸ್ತ್ರದ ಮೇಲೆ ಕಂಠಪೂರ್ತಿ ಕುಡಿದ ಪೊಲೀಸರನ್ನು ನಡು ರಸ್ತೆಯಲ್ಲಿಯೇ ಹಿಗ್ಗಾ ಮುಗ್ದಾ ತರಾಟೆಗೆ ತಗೆದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

ಸ್ಟ್ರಾಂಗ್ ರೂಂ ಕಾವಲಿಗೆ ನಿಯೋಜನೆಗೊಂಡ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತುಕೊಂಡು ಕುಡಿದಿದ್ದಾರೆ.ಫುಲ್ ಟೈಟ್ ಆಗಿದ್ದಾರೆ.ಸಮವಸ್ತ್ರದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಕುಡಿಯುತ್ತಿರುವುದನ್ನು ನೋಡಿದ ಯುವಕರು ಪೊಲೀಸರು ಎಣ್ಣೆ ಹೊಡೆಯುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ ಸಾಲದಂತೆ ತರಾಟೆಗೆ ತಗೆದುಕೊಂಡಿದ್ದಾರೆ.

ಕುಣಿಗಲ್ ಪೊಲೀಸ್ ಠಾಣೆಯ ಪೊಲೀಸರಿಗೆ ಸಾರ್ವಜನಿಕರಿಂದ ಹಿಗ್ಗಾಮಗ್ಗಾ ತರಾಟೆ ತಗೆದುಕೊಂಡಿದ್ದಾರೆ.ಕುಣಿಗಲ್ ನ ಯಾಚಗಟ್ಟಾ ರಸ್ತೆಯ ಪಕ್ಕದಲ್ಲಿ ಎಣ್ಣೆ ಪಾರ್ಟಿ ನಡೆದಿರುವ ಘಟನೆ ಕಂಡು ಬಂದಿದೆ.ಸರ್ಕಾರಿ ಪೊಲೀಸ್ ವಾಹನದೊಂದಿಗೆ ಸಮವಸ್ತ್ರದ ಮೇಲೆ ಬಂದು ಕುಡಿಯುತ್ತಿರುವದನ್ನು ನೋಡಿದ ಯುವಕರು ಸಾರ್ವಜನಿಕರು ನೋಡುತಿದ್ದಂತೆ ಸ್ಥಳದಿಂದ ಪೊಲೀಸರು ಜಾಗವನ್ನು ಖಾಲಿ ಮಾಡಿದ್ದಾರೆ.

ಅಲ್ಲಿಂದ ಹೋಗುತ್ತಿದ್ದ ಪೊಲೀಸರನ್ನು ಬಳಿಕ ಕುಣಿಗಲ್ ಪಟ್ಟಣದಲ್ಲಿ ಸಾರ್ವಜನಿಕರು ತರಾಟೆಗೆ ತಗೆದುಕೊಂಡಿದ್ದಾರೆ.ಸಾರ್ವಜನಿಕರ ಪ್ರಶ್ನೆಗೆ ಕಳ್ಳರಂತೆ ಓಡಿ ಹೋಗಿದ್ದಾರೆ ಒರ್ವ ಎಎಸ್ಐ ಮತ್ತು ಮೂವರು ಪೊಲೀಸ್ ಪೇದೆಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.