ಅಣ್ಣಿಗೇರಿ –
ನೂತನವಾಗಿ ಅಣ್ಣಿಗೇರಿ ಪಟ್ಟಣದಲ್ಲಿ ಆರಂಭಗೊಂಡ ಉಪಖಜಾನೆ ಕಚೇರಿಯನ್ನು ನಗರ ಮೂಲಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರು ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ ಕಾರ್ಯಾಲಯ ಉದ್ಘಾಟಿಸಿದರು.
ಅಣ್ಣಿಗೇರಿ ಪಟ್ಟಣದ ಸ್ಥಳೀಯ ಹುಡ್ಕೊ ಕಾಲೊನಿಯಲ್ಲಿ ನೂತನ ಕಚೇರಿಯನ್ನು ಲೋಕಾರ್ಪಣೆ ಮಾಡಲಾಯಿತು.
ಇನ್ನೂ ಇದೇ ವೇಳೆ ಶಾಸಕರು ಮಾತನಾಡಿ ಹೊಸ ತಾಲ್ಲೂಕು ಕೇಂದ್ರಕ್ಕೆ ಈಗಾಗಲೇ ತಹಶೀಲ್ದಾರ್, ಉಪನೋಂದಣಿ ಹಾಗೂ ಖಜಾನೆ ಕಚೇರಿಗಳನ್ನು ತರಲಾಗಿದೆ. ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಉಳಿದ ಕಚೇರಿಗಳನ್ನೂ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಇನ್ನೂ ಪಟ್ಟಣ ತಾಲ್ಲೂಕು ಕೇಂದ್ರವಾದ ನಂತರ ಸಾಕಷ್ಟು ಅಭಿವೃದ್ದಿ ಹೊಂದುತ್ತಿದೆ. ಜೊತೆಗೆ ತಾಲ್ಲೂಕಿಗೆ ಅಗತ್ಯವಾಗಿರುವ ವಿವಿಧ ಸರ್ಕಾರಿ ಕಚೇರಿಗಳನ್ನು ಹಂತಹಂತವಾಗಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಇದರೊಂದಿಗೆ ತಾಲ್ಲೂಕಿನ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಕೆಲಸ ಮಾಡಲು ಮಿನಿವಿಧಾನ ಸೌಧ ಕೂಡ ಆದಷ್ಟು ಬೇಗನೆ ನಿರ್ಮಿಸಲಾಗುವುದು. ಇದರೊಂದಿಗೆ ಜನರಿಗೆ 24X7 ಕುಡಿಯುವ ನೀರು ಒದಗಿಸಲಾಗುವುದು ಎಂದರು.
ಇನ್ನೂ ಇದೇ ವೇಳೆ ಖಜಾನೆ ಇಲಾಖೆಯ ಬೆಳಗಾವಿ ಜಂಟಿ ನಿರ್ದೇಶಕ ಸುರೇಶ ಹಳ್ಯಾಳ ಮಾತನಾಡಿ ಮೊದಲು ಖಜಾನೆ ಇಲಾಖೆಯಿಂದ ಆಗುತ್ತಿದ್ದ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗುತ್ತಿತ್ತು. ಈಗ ಆದಷ್ಟು ಶೀಘ್ರವಾಗಿ ಕೆಲಸಗಳಾಗುತ್ತವೆ ಎಂದರು.
ಜಿಲ್ಲಾ ಖಜಾನೆ ಉಪನಿರ್ದೇಶಕಿ ವೈ.ವೈ.ಹೊನ್ನಳ್ಳಿ, ನೂತನ ತಾಲ್ಲೂಕಿನ ಸಹಾಯಕ ಖಜಾನೆ ಅಧಿಕಾರಿ ಎಂ.ಎಂ.ಚಿಕ್ಕನ್ನವರ, ಷಣ್ಮುಖ ಗುರಿಕಾರ, ಮುಖ್ಯಾಧಿಕಾರಿ ಕೆ.ಎಫ್.ಕಟಗಿ,
ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದ ಖಜಾನೆ ಇಲಾಖೆ ಸಿಬ್ಬಂದಿಗಳಾದ ದೀಪಾ ಗಡ್ಕರಿ,ಪರವೀನ್ ಬಾನು ಬುಳ್ಳನ್ನವರ ಸೇರಿದಂತೆ ಕಚೇರಿಯ ಸಿಬ್ಬಂದ್ದಿಗಳು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.