ಸೋತವರ ಮನೆ ಮುಂದೆ ಪಟಾಕಿ‌ – ಪರಾಜಿತ ಅಭ್ಯರ್ಥಿ  ಕುಟುಂಬಸ್ಥರ ಮೇಲೆ ಹಲ್ಲೆ.

Suddi Sante Desk

ವಿಜಯಪುರ –

ಸೋತವರ ಮನೆ ಮುಂದೆ ಬಂದು ಪಟಾಕಿ ಹಚ್ಚಿದನ್ನು ಪ್ರಶ್ನೆ ಮಾಡಿದಕ್ಕೆ ಗೆದ್ದ ಅಭ್ಯರ್ಥಿಗಳು ಪರಾಜಿತ ಅಭ್ಯರ್ಥಿ ಮತ್ತು ಕುಟುಂಬದವರ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ‌.ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಪರಾಜಿತ ಅಭ್ಯರ್ಥಿ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ.

ಗೆದ್ದ ಅಭ್ಯರ್ಥಿಗಳ ಬೆಂಬಲಿಗರಿಂದ ಸೋತವರ ಮೇಲೆ ಹಲ್ಲೆ ಆಗಿದೆ ಎಂದು ಹಲ್ಲೆಗೊಳಗಾದವರ ಆರೋಪ ಮಾಡಿದ್ದಾರೆ. ಚಡಚಣ ತಾಲೂಕಿನ ಧುಮಕನಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಪರಾಜಿತ ಅಭ್ಯರ್ಥಿ ಶಿವಪ್ಪ ಕನಾಳ, ರಾಯಪ್ಪ ಕನಾಳ, ಶ್ರೀಶೈಲ ಕನಾಳ, ಪುತಳಾಬಾಯಿ ಕನಾಳ, ಭೀಮಕ್ಕ ಕನಾಳ ಮೇಲೆ ಹಲ್ಲೆ ಮಾಡಲಾಗಿದೆ.

ಗೆದ್ದ ಅಭ್ಯರ್ಥಿಗಳಾದ ಚಂದ್ರಕಾಂತ ನಂದಗೊಂಡ, ಅಪ್ಪುಗೌಡ ಪಾಟೀಲ್, ಲಕ್ಷ್ಮಣ ಘೋರ್ಪಡೆ ಬೆಂಬಲಿಗರಿಂದ ಹಲ್ಲೆ ಆಗಿದೆ ಎಂದು ಆರೋಪ ಮಾಡಿದ್ದಾರೆ.ನಂದರಗಿ ಗ್ರಾಮ ಪಂಚಾಯತಿಯ 2ನೇ ವಾರ್ಡ್ ಗೆ ಸ್ಪರ್ಧಿಸಿದ್ದ ಶಿವಪ್ಪ ಕನಾಳ ಪರಾಜಿತಗೊಂಡಿದ್ದರು.ಶಿವಪ್ಪನ ವಿರುದ್ಧ ಜಯಭೇರಿ ಬಾರಿಸಿದ್ದ ಚಂದ್ರಕಾಂತ ನಂದಗೊಂಡ ಹಾಗೂ ಆತನ ಬೆಂಬಲಿಗರು ಶಿವಪ್ಪನ ಮನೆಮುಂದೆ ಪಟಾಕಿ ಹಚ್ಚಿದ್ದರು.

ಈ‌ ವೇಳೆ ನಮ್ಮ ಮನೆಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಪರಾಜಿತ ಅಭ್ಯರ್ಥಿ ಹಾಗೂ ಆತನ‌ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ.ಕಳೆದ ರಾತ್ರಿ ಈ ಒಂದು ಘಟನೆ ನಡೆದಿದೆ ಗಾಯಾಳುಗಳು ಚಡಚಣ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.