ಹುಬ್ಬಳ್ಳಿ –
ಗ್ರಾ.ಪಂ. ಚುನಾವಣೆ; ಎರಡನೇ ಹಂತದ ಮತದಾನ ಧಾರವಾಡ ಜಿಲ್ಲೆಯಲ್ಲೂ ಆರಂಭವಾಗಿದೆ.ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳಲ್ಲಿ ಮತದಾನವಾಗುತ್ತಿದೆ.
ಒಟ್ಟು 71 ಗ್ರಾಮ ಪಂಚಾಯತಿಗಳ 1032 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.3547ಅಭ್ಯರ್ಥಿಗಳು ಕಣದಲ್ಲಿದ್ದು ನಾಲ್ಕೂ ತಾಲೂಕು ಸೇರಿ 469 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
76 ಸೂಕ್ಷ್ಮ, 58 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು 3,23,047 ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಹುಬ್ಬಳ್ಳಿ ತಾಲೂಕಿನ 26, ಕುಂದಗೋಳ 23, ನವಲಗುಂದ 14 ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ 8 ಗ್ರಾಮ ಪಂಚಾಯತಿಗೆ ಚುನಾವಣೆ ಇಂದು ನಡೆಯುತ್ತಿದೆ.
ಇನ್ನೂ ಮತದಾನದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಂದ ಮತಗಟ್ಟೆಗೆಗಳಿಗೆ ಪೂಜೆ ಕಂಡು ಬಂದಿತು.ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ಪಂಚಾಯಿತಿ ಗಳಲ್ಲಿ ಪೂಜೆ ಸಲ್ಲಿಸಿದರು.
ಮತಪೆಟ್ಟಿಗೆಗೆ ಹೂವು ಏರಿಸಿ, ಊದಬತ್ತಿ ಬೆಳಗಿ ಪ್ರಾರ್ಥನೆ ಮಾಡಿದರು.