- ಧಾರವಾಡ –
ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ Vote For Ops ಅಭಿಯಾನದಡಿ ಶಾಸಕರಾದ ಅಮೃತ ದೇಸಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ನೌಕರರ ಬಗ್ಗೆ ಮುಖ್ಯ ಮಂತ್ರಿಗಳು ಕಾಳಜಿ ಹೊಂದಿದ್ದು ನೌಕರರಿಗೆ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲಾಗುತ್ತಿದ್ದು NPS ರದ್ದು ಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿ ಬಗ್ಗೆ ನಾನು ಖುದ್ದಾಗಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸುವುದಾಗಿ ಮತ್ತು ಅಧಿವೇಶ ನದಲ್ಲಿಯೂ ಕೂಡಾ ಒತ್ತಾಯ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪಿ ಎಫ್ ಗುಡೇನಕಟ್ಟಿ,ತಾಲೂಕು ಅಧ್ಯಕ್ಷ ರಾದ ಎಂ ಅರ್ ಕಬ್ಬೇರ್ , ಕಾರ್ಯದರ್ಶಿ ಸೈಯದ್ ಕುಪ್ಪೇಲೂರ ಹಾಗೂ ಉಮೇಶ ಕುರುಬರ, ಶಾಂತಯ್ಯ ಹಿರೇಮಠ, ಹನುಮಂತ ಡೊಕ್ಕನವರ,ಉಮೇಶ ಕುರುಬರ,ಸಿದ್ದು ವಾರದ್ ಎನ್ ಬಿ ಹುಗ್ಗಿ ರುದ್ರಪ್ಪ ಕುರ್ಲಿ ರಾಜು ಬೆಟಗೇರಿ, ನಾಗರಾಜ್ ಈಚಗೇರಿ ವಿ ಪಿ ಬಡಿಗೇರ್ ಹಾಗೂ ಪ್ರದೀಪ್ ಶೆಟ್ಟಿ ಎನ್ ಆರ್ ಕಟ್ಟಿಮನಿ ರಾಜು ಪಿಂಜಾರ್ ನಾಗರಾಜ್ ತಳವಾರ್ ಮುಲ್ಲಾ ನವರ್ ನಾಗರಾಜ್ ಮಡಿವಾಳರ್. ಎಂ ಸಿ ಎಲಿಗಾರ ಯವರು ಸೇರಿದಂತೆ ವಿವಿಧ ಇಲಾಖೆ ಗಳ ನೂರಾರು ನೌಕರರು ಉಪಸ್ಥಿತರಿದ್ದರು.
ವಿಶೇಷವಾಗಿ ಶಿಕ್ಷಕ ಸಂಘಟನೆಗಳ ಮುಖಂಡ ರಾದ ಎಸ್ ಬಿ ಕೇಸರಿ,ಶಂಕರ ಘಟ್ಟಿ , ಎಚ್ ಎಂ ಶಿವಯೋಗಿ, ಚಂದ್ರಶೇಖರ ತಿಗಡಿ, ಆರ್ ಎಸ್ ಹಿರೇಗೌಡ್ರ, ಶಿವಸಿಂಪಿ ಐ ಎಚ್ ನದಾಫ್ , ಬಿ ಐ ಮನಗುಂಡಿ, ಎನ್ ಸಿ ಪಾಟೀಲ ,ಹಾಗೂ ಮಹಿಳಾ ನೌಕರರ ಧ್ವನಿಯಾಗಿ ಶ್ರೀಮತಿ ಎಸ್ ಬಿ ಅರಮನಿ ಶ್ರೀಮತಿ ವಿಜಯಲಕ್ಷ್ಮಿ ಕಮ್ಮಾರ್ ಹಾಗೂ ಶ್ರೀಮತಿ ಎನ್ ಆರ್ ಪಟೇಲ್ ಮಂಜು ಪೂಜಾರ್ ಪ್ರಕಾಶ್ ರಾಥೋಡ್ ಪತ್ತಾರ್ ಅವರು ಉಪಸ್ಥಿತ ರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..