This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ವಿದ್ಯಾರ್ಥಿಗಳಿಗೆ TC ಕುರಿತಂತೆ ಶಾಲೆಗಳಿಗೆ ಇಲಾಖೆಯಿಂದ ಮಹತ್ವದ ಆದೇಶ – ಇಲಾಖೆಯಿಂದ ಮಹತ್ವದ ಮಾಹಿತಿಯೊಂದಿಗೆ ಆದೇಶ…..

ವಿದ್ಯಾರ್ಥಿಗಳಿಗೆ TC ಕುರಿತಂತೆ ಶಾಲೆಗಳಿಗೆ ಇಲಾಖೆಯಿಂದ ಮಹತ್ವದ ಆದೇಶ – ಇಲಾಖೆಯಿಂದ ಮಹತ್ವದ ಮಾಹಿತಿಯೊಂದಿಗೆ ಆದೇಶ…..
WhatsApp Group Join Now
Telegram Group Join Now

ಬೆಂಗಳೂರು

ವಿದ್ಯಾರ್ಥಿಗಳಿಗೆ TC (ವರ್ಗಾವಣೆ ಪ್ರಮಾಣ ಪತ್ರ) ವಿತರಣೆ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.ರಾಜ್ಯದಲ್ಲಿನ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆ ಗಳಲ್ಲಿನ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ ವನ್ನು ಸಕಾಲದಲ್ಲಿ ವಿತರಿಸದೇ ಕಾಲಹರಣ ಮಾಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಅಧಿಕೃತವಾಗಿ ಶಾಲೆಗೆ ದಾಖಲಾಗದೇ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿ ಆತಂಕ ದಲ್ಲಿ ಸಿಲುಕಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗಕ್ಕೆ ಹಲವಾರು ದೂರು ಸಲ್ಲಿಸಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿ,

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ 2005ರ ಸೆಕ್ಷನ್ 13(ಜೆ) ರಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ದೂರುಗಳನ್ನು ಆಯೋಗವು ಸ್ವೀಕರಿಸಿ, ವಿಚಾರಣೆ ನಡೆಸುತ್ತಿದೆ. ವಿದ್ಯಾರ್ಥಿಗಳ ವರ್ಗಾವಣೆ ಪತ್ರ ವಿತರಣೆ ಸಂಬಂಧ ರಾಷ್ಟ್ರದ ವಿವಿಧ ರಾಜ್ಯಗಳ ರಾಜ್ಯ ಉಚ್ಚನ್ಯಾಯಾಲಯ ಗಳಲ್ಲಿ ದಾಖಲಾಗಿರುವ ದಾವೆಗಳ ತೀರ್ಪಿನ ಅಡಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯಿಂದ ವಂಚಿತ ರಾಗದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಲು ಪೋಷಕರು ಬಯಸಿದಲ್ಲಿ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009* ಸೆಕ್ಷನ್ 5(1)ರ ಉಲ್ಲಂಘನೆಯಾ ಗದಂತೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ವರ್ಗಾವಣೆ ಪತ್ರವನ್ನು ವಿತರಿಸುವುದು ಶಾಲಾ ಮುಖ್ಯಸ್ಥರ ಅದ್ಯ ಕರ್ತವ್ಯವಾಗಿರುತ್ತದೆ.ಶಾಲಾ ಮುಖ್ಯಸ್ಥರು ಸಕಾಲದಲ್ಲಿ ವರ್ಗಾವಣೆ ಪತ್ರವನ್ನು ವಿತರಿಸದಿದ್ದಲ್ಲಿ ಪೋಷಕರು ವಲಯದ ಕ್ಷೇತ್ರ ಶಿಕ್ಷಣಾ  ಧಿಕಾರಿಗಳಿಗೆ ಮನವಿ ಸಲ್ಲಿಸತಕ್ಕದ್ದು, ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸದರಿ ಶಾಲಾ ಮುಖ್ಯಸ್ಥರಿಗೆ ಒಂದು ವಾರ ಕಾಲಾವಕಾಶ ನೀಡಿ. ಮನವಿಯನ್ನು ಇತ್ಯರ್ಥಪಡಿಸಲು ಕ್ರಮವಹಿಸತಕ್ಕದು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಕಾಲಾವಧಿಯಲ್ಲಿ ವರ್ಗಾವಣೆ ಪತ್ರವನ್ನು ವಿತರಿಸಲು ಶಾಲೆಯು ವಿಫಲ ವಾದಲ್ಲಿ, ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಮುಖ್ಯಸ್ಥರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983ರ/ಸೆಕ್ಷನ್ 106(2)(ಬಿ)ರಡಿ ಸಕ್ಷಮ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಕ್ರಮವಹಿಸಿ. ಮಕ್ಕಳ ಶೈಕ್ಷಣಿಕ ಚಟುವಟಿಕೆಗ ಳಿಂದ ವಂಚಿತರಾಗದಂತೆ ಕ್ರಮವಹಿಸಲು ಸೂಚಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk