ನವದೆಹಲಿ –
ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ತರುತ್ತಿ ರುವ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ವಿಚಾರ ಕುರಿತಂತೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.ಹೌದು ಈ ಒಂದು ಯೋಜನೆ ಮರಳಿ ಜಾರಿಗೆ ಬರುತ್ತದೆ ಎಂದುಕೊಂಡು ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ ಯಾವುದೇ ಕಾರಣಕ್ಕೂ ಈ ಒಂದು ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರುವ ಯೋಚನೆ ಇಲ್ಲವೆಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಡಾ.ಭಗವದ್ ಕರದ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಈ ಕುರಿತಂತೆ ಸದಸ್ಯರೊಬ್ಬರು ಕೇಳಿದ ಉತ್ತರಕ್ಕೆ ಲಿಖಿತ ಉತ್ತರದಲ್ಲಿ ಉತ್ತರಿಸಿ ದ್ದಾರೆ.ಹಳೆಯ ಪಿಂಚಣಿ ಯೋಜನೆಯನ್ನು ಪುನಶ್ಚೇತನಗೊಳಿಸುವ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಕೇಂದ್ರ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದಿದ್ದಾರೆ.
ಇನ್ನೂ ರಾಜಸ್ಥಾನ,ಛತ್ತೀಸ್‌ಗಢ ಮತ್ತು ಜಾರ್ಖಂಡ್ ಸರ್ಕಾರಗಳು ತಮ್ಮ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾ ಪಿಸಲು ನಿರ್ಧರಿಸಿವೆ.ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯಡಿ ಚಂದಾದಾರರ ಸಂಗ್ರಹವಾದ ನಿಧಿ ಹಿಂದಿ ರುಗಿಸಲು ಈ ರಾಜ್ಯಗಳು ಕೇಂದ್ರ ಮತ್ತು ಪಿಂಚಣಿ ನಿಧಿ ನಿಯಂತ್ರಣ,ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾ ವನೆಗಳನ್ನು ಕಳುಹಿಸಿವೆ. ಪಿಎಫ್‌ಆರ್‌ಡಿಎ ಕಾಯಿದೆ ಮತ್ತು ಇತರ ಸಂಬಂಧಿತ ನಿಯಮಗಳ ಅಡಿಯಲ್ಲಿ, ಸರ್ಕಾರದ ಕೊಡುಗೆ ಮತ್ತು ನೌಕರರ ಕೊಡುಗೆಯನ್ನು ಮರುಪಾವತಿಸಲು ಮತ್ತು ಠೇವಣಿ ಮಾಡಲು ಯಾವುದೇ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಅವರಿಗೆ ತಿಳಿಸಲಾಗಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..