ಹುಬ್ಬಳ್ಳಿಗೆ ಡಿಕೆಶಿ – ಬೆಳಗಾವಿ ವಿಭಾಗದ ಜಿಲ್ಲೆಗಳ ಸ್ಥಳೀಯ ನಾಯಕರೊಂದಿಗೆ ಸಮಾಲೋಚನಾ ಸಭೆ

Suddi Sante Desk

ಬೆಂಗಳೂರು –

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಜನೇವರಿ 10 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈಗಾಗಲೇ ಇಂದಿನಿಂದ ಪ್ರವಾಸ ಆರಂಭ ಮಾಡಿರುವ ಡಿಕೆಶಿ ಅವರು ಇಂದು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ನಂತರ ನಾಳೆ ಬಂಟ್ವಾಳದಲ್ಲಿ ಮೈಸೂರು ವಿಭಾಗದ ಪಕ್ಷದ ಸ್ಥಳೀಯ ನಾಯಕರೊಂದಿಗೆ ಸಭೆ ಮಾಡಲಿದ್ದಾರೆ.

ಮಂಗಳೂರಿನಲ್ಲಿ ವಾಸ್ತವ್ಯ ಮಾಡಿ ಜನೇವರಿ 7 ರಂದು ಮಂಗಳೂರಿನಿಂದ ಬೆಂಗಳೂರಿಗೆ ತೆರಳಿ ಜನೇವರಿ 8 ರಂದು ಬೆಳಿಗ್ಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಬೆಂಗಳೂರು ವಿಭಾಗದ ಸ್ಥಳೀಯ ನಾಯಕರೊಂದಿಗೆ ಸಭೆ ಮಾಡಲಿದ್ದಾರೆ.

ನಂತರ ಜನೇವರಿ 10 ಕ್ಕೆ ವಿಮಾನದ ಮೂಲಕ ಸಂಜೆ 6 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಜನೇವರಿ 11 ಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಎದುರಿಗೆ ಇರುವ ಖಾಸಗಿ ಹೊಟೇಲ್ ನಲ್ಲಿ ಸ್ಥಳೀಯ ಕಾಂಗ್ರೇಸ್ ಪಕ್ಷದ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರೊಂದಿಗೆ ಸಭೆ ಮಾಡಲಿದ್ದಾರೆ.

ನಂತರ ರಾತ್ರಿ ರೈಲ್ವೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಒಟ್ಟಾರೆ ಇನ್ನೇನು ಸಧ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು ಈಗಿನಿಂದಲೇ ಕಾಂಗ್ರೇಸ್ ಪಕ್ಷ ತಯಾರಿ ಆರಂಭ ಮಾಡಿದಂತೆ ಕಾಣುತ್ತಿದ್ದು ಹೀಗಾಗಿ ಡಿಕೆ ಶಿವಕುಮಾರ ಅವರು ರಾಜ್ಯವ್ಯಾಪಿ ಪ್ರವಾಸವನ್ನು ಕೈಗೊಂಡು ಸ್ಥಳೀಯ ಪಕ್ಷದ ನಾಯಕರೊಂದಿಗೆ ಚರ್ಚೆ ಸಭೆ ಮಾಡಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.