ಬೆಂಗಳೂರು –
ಹುಬ್ಬಳ್ಳಿಯ ಜೆಡಿಎಸ್ ಪಕ್ಷದ ಮಹಿಳಾ ಸಂಘಟನೆಯ ನಾಯಕಿ ಶ್ರೀಮತಿ ಪೂರ್ಣಿಮಾ ಮಹೇಶ್ ಸವದತ್ತಿ ಯವರಿಗೆ ಪಕ್ಷದಲ್ಲಿ ಮತ್ತೊಂದು ಪ್ರಮುಖವಾದ ಸ್ಥಾನಮಾನವನ್ನು ನೀಡಲಾಗಿದೆ.ಹೌದು ಈಗಾಗಲೇ ಮಹಿಳಾ ವಿಭಾಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾ ಗಿರುವ ಇವರಿಗೆ ಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇವರ ಕೆಲಸ ಕಾರ್ಯ ಗಳನ್ನು ಹಾಗೇ ಪಕ್ಷದ ಸಂಘಟನೆಯೊಂದಿಗೆ ಹತ್ತಾರು ಚಟುವಟಿಕೆಗಳನ್ನು ಮಾಡುತ್ತಿರುವ ಇವರಿಗೆ ಈಗ ಪಕ್ಷದ ನಾಯಕರು ಮತ್ತೊಂದು ಜವಾಬ್ದಾರಿಯನ್ನು ನೀಡಿದ್ದಾರೆ.
ಹೌದು ರಾಜ್ಯ ಮಹಿಳಾ ವಿಭಾಗದ ಪೋಷಕರು ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಇವರು ಪೂರ್ಣಿಮಾ ಮಹೇಶ ಸವದತ್ತಿ ಯವರಿಗೆ ಧಾರವಾಡ ಹಾವೇರಿ ಗದಗ ಹಾಗೂ ಬೆಳಗಾವಿ ಹೀಗೆ ನಾಲ್ಕು ಜಿಲ್ಲೆಗಳ ಸಂಘಟನಾ ಉಸ್ತುವಾರಿ ಯನ್ನಾಗಿ ಜವಾಬ್ದಾರಿಯನ್ನು ನೀಡಲಾಗಿದೆ.ಈ ಒಂದು ಜವಾಬ್ದಾರಿಯನ್ನು ನೀಡಿ ಆದೇಶವನ್ನು ಮಾಡಲಾಗಿದೆ. ಬೆಂಗಳೂರಿ ನಲ್ಲಿ ಲೀಲಾದೇವಿ ಆರ್ ಪ್ರಸಾದ್ ಅವರು ಪೂರ್ಣಿಮಾ ಸವದತ್ತಿಯ ವರಿಗೆ ಈ ಒಂದು ಜವಾಬ್ದಾರಿಯನ್ನು ನೀಡಿ ಆದೇಶ ಪತ್ರಗಳನ್ನು ನೀಡಿ ಗೌರವಿಸಿದರು.
ಇನ್ನೂ ಈ ಒಂದು ಜವಾಬ್ದಾರಿಯನ್ನು ನೀಡಿದ್ದು ಪಕ್ಷದ ಸಂಘಟನೆ ಕೆಲಸ ಕಾರ್ಯಗಳನ್ನು ನೋಡಿ ಕೊಟ್ಟಿದ್ದು ತುಂಬಾ ಸಂತೋಷವಾಗಿದ್ದು ಬರುವ ದಿನಗಳಲ್ಲಿ ಈ ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಸಂಘಟನಾ ಕೆಲಸ ಕಾರ್ಯಗ ಳನ್ನು ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿ ಸೋದಾಗಿ ಹೇಳಿದರು.ಇನ್ನೂ ಪಕ್ಷದಲ್ಲಿ ಮತ್ತೊಂದು ಜವಾಬ್ದಾರಿಯನ್ನು ನೀಡಿದ್ದಕ್ಕೆ ಜೆಡಿಎಸ್ ಪಕ್ಷದ ಧಾರವಾಡ ಜಿಲ್ಲಾ ಘಟಕದ ಮುಖಂಡರಾದ ಗುರುರಾಜ ಹುಣಸಿಮರದ. ಸಲೀಂಖಾನ್ ಕುಡಚಿ,ಸೇರಿದಂತೆ ಜಿಲ್ಲೆಯ ನಾಯಕರು ಪ್ರಮುಖರು ಪೂರ್ಣಿಮಾ ಸವದತ್ತಿ ಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……