ಮುರಗೇಶ ನಿರಾಣಿ ಜೊತೆಯಲ್ಲಿ ರಾಧಿಕಾ ಕುಮಾರಸ್ವಾಮಿ ಪೊಟೊ ವೈರಲ್ -ಚರ್ಚೆಗೆ ಗ್ರಾಸವಾಗಿದೆ ಪೊಟೊ

Suddi Sante Desk

ಬೆಂಗಳೂರು ,-

ರಾಧಿಕಾ ಕುಮಾರಸ್ವಾಮಿ ಅವರನ್ನು ವಿವಾದ ಬೆನ್ನು ಹತ್ತಿಕೊಂಡು ಬರುತ್ತಿದೆ. ರಾಜಕಾರಣಿಗಳ ಹೆಸರಲ್ಲಿ ಮೋಸ ಮಾಡಿದ್ದ ವಂಚಕ ಜ್ಯೋತಿಷಿ ಯುವರಾಜ್ ಜೊತೆ ಹಣಕಾಸಿನ ಸಂಬಂಧ ಇರಿಸಿಕೊಂಡಿದ್ದ ರಾಧಿಕಾ ಪ್ರಭಾವಿ ಈಗ ರಾಜಕಾರಣಿ ಮುರುಗೇಶ್ ನಿರಾಣಿ ಜೊತೆ ಇರುವ ಫೋಟೋ ಇದೀಗ ವೈರಲ್ ಆಗಿದೆ.

ಈ ಮೂಲಕ ವಂಚಕ ಜ್ಯೋತಿಷಿ ಯುವರಾಜ್ ಆಲಿಯಾಸ್ ಸ್ವಾಮಿ ಕೇಸ್‌ಗೆ ಹೊಸ ಟ್ವಿಸ್ಟ್ ದೊರೆತಿದೆ ಎನ್ನಲಾಗಿದೆ.ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆಯನ್ನು ಎದುರಿಸಿದ್ದರು. ಯುವರಾಜ್ ಅವರನ್ನು 17 ವರ್ಷಗಳಿಂದ ಬಲ್ಲೆ, ಅವರ ಜೊತೆ ನನಗೆ ಹಣಕಾಸಿನ ಸಂಬಂಧ ಇದೆ. ಅವರು ನಮ್ಮ ಕುಟುಂಬದ ಜ್ಯೋತಿಷಿ ಎಂದೆಲ್ಲ ಹೇಳಿದ್ದ ರಾಧಿಕಾ ಅವರನ್ನು ಸಿಸಿಬಿ ಸಾಕಷ್ಟು ಡ್ರಿಲ್ ಮಾಡಿತ್ತು ಸಿಸಿಬಿ ಕಚೇರಿಯಿಂದ ಹೊರಬಂದಿದ್ದರು‌.

ವಿಚಾರಣೆ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದರು. ಅಲ್ಲದೆ, ವಿಚಾರಣೆಗೆ ಮತ್ತೊಮ್ಮೆ ಕರೆದರೆ ಬರುತ್ತೇನೆ ಎಂದು ಹೇಳಿದ್ದರು.
ಇದೀಗ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಜೊತೆ ರಾಧಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು, ವೈರಲ್ ಆಗಿದೆ. ಈ ಭೇಟಿಯಿಂದ ಪ್ರಕರಣಕ್ಕೂ ಟ್ವಿಸ್ಟ್ ಸಿಕ್ಕಿದೆ ಎನ್ನಲಾಗಿದ್ದು ಅಧಿಕಾರಿಗಳು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.