ಧಾರವಾಡ –
ಶಿಕ್ಷಕರ ಧ್ವನಿಯಾಗಿ BEO ಗೆ ಮನವಿ ಸಲ್ಲಿಸಿದ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕರಿಗೆ ಧ್ವನಿಯಾಗಿ ಮೇಲಾಧಿಕಾರಿ ಗಳಿಗೆ ಮನವಿ ನೀಡಿ ಸೌಲಭ್ಯಗಳಿಗೆ ಒತ್ತಾಯಿ ಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗ
ಹೌದು ಶಿಕ್ಷಕರ ಕೆಲವೊಂದಿಷ್ಟು ಬೇಡಿಕೆಗಳ ಕುರಿತಂತೆ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮನವಿಯನ್ನು ಸಲ್ಲಿಸಿ ದರು.ಧಾರವಾಡದಲ್ಲಿ ತಾಲೂಕ ಘಟಕದಿಂದ ಶಿಕ್ಷಕರ ನಿಯೋಗವು ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಯಿತು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್ ಘಟ್ಟಿ ನೇತೃತ್ವದಲ್ಲಿ ತಾಲೂಕ್ ಘಟಕದ ಪದಾಧಿಕಾರಿ ಗಳ ನಿಯೋಗವು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಆರ್ ಸದಲಗಿ ಅವರನ್ನು ಭೇಟಿ ಮಾಡಿದ ಶಿಕ್ಷಕರು ಸೇವಾ ಸೌಲಭ್ಯ ಮತ್ತು ಆಡಳಿತಕ್ಕೆ ಸಂಬಂಧಿಸಿದ ಶಿಕ್ಷಕರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಸುದೀರ್ಘ ವಾಗಿ ಚರ್ಚಿಸಿದರು.
ಚರ್ಚೆಯ ಸಂದರ್ಭದಲ್ಲಿ ಮ್ಯಾನೇಜರ್ ಶ್ರೀಮತಿ ಭಾಗ್ಯಶ್ರೀ ಶರ್ಮ, ಮತ್ತು ಅಧೀಕ್ಷಕೀಯರು ಇದ್ದರು ಪ್ರಮುಖವಾಗಿ ಈ ಒಂದು ಸಂದರ್ಭದಲ್ಲಿ ಚರ್ಚಿಸಿದ ಪ್ರಮುಖ ಸಮಸ್ಯೆಗಳು ಈ ಕೆಳಗಿನಂ ತಿವೆ.ಗುರು ಸ್ಪಂದನ ಕಾರ್ಯಕ್ರಮ ಶಿಕ್ಷಕರ ಕಲ್ಯಾಣ ನಿಧಿ ಆನ್ಲೈ್್ ಲೈನ್ ಲೈನ ಅಜೀವ ಸದಸ್ಯತ್ವ ಸದಸ್ಯತ್ವ ನವೀಕರಣ ಮುಂತಾದವು ಗಳ ಬಗ್ಗೆ ಚರ್ಚೆಯನ್ನು ಮಾಡಲಾಯಿತು
ಪ್ರಧಾನ ಗುರುಗಳ ಪ್ರಭಾರಿ ಭತ್ತೆ ಶಿಕ್ಷಕರ ಆನ್ ಲೈನ ಸೇವಾ ಸೌಲಭ್ಯ ಗಳ ಕುರಿತು ತರಬೇತಿ ಶಾಲಾ ಅವಧಿಯಲ್ಲಿ ಗೂಗಲ್ ಮೀಟ್ ಸಭೆ ಆಯೋಜನೆ , ಮಕ್ಕಳ ಕಲಿಕೆಗೆ ಆಗುತ್ತಿರುವ ತೊಂದರೆ ಶಿಕ್ಷಕರ ಪ್ರತಿ ತಿಂಗಳ ವೇತನದ ಮಾಹಿತಿಯ ಎಸ್ಎಂಎಸ್ ಸೌಲಭ್ಯ ನಲಿ ಕಲಿ ತರಗತಿ ಸಮಸ್ಯೆಗಳು ಎಚ್ ಆರ್ ಎಂ ಎಸ್ ನಲ್ಲಿ ಗಳಿಕೆ ರಜೆಗಳ ಅಪ್ಡೇಟ್
SATS, ಆಧಾರ್ ಅಪ್ಡೇಟ್, ಯುಡೈಸ್ ಪ್ಲಸ್ ಅಪ್ಡೇಟ್, ಮುಂತಾದ ಆನ್ಲೈನ್ ಕಾರ್ಯಗಳಿಂದ ಮಕ್ಕಳ ಕಲಿಕೆಗೆ ಆಗುತ್ತಿರುವ ತೊಂದರೆಗಳು
ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರ ಸಮಸ್ಯೆ
ಶಿಕ್ಷಕರ ಐಡಿ ಕಾರ್ಡ್ ಶಾಲೆಗಳಿಗೆ ಅಗತ್ಯವಾದ ಮಕ್ಕಳ ಹಾಜರಿ, ಪ್ರವೇಶ ಪತ್ರ, ವರ್ಗಾವಣೆ ಪತ್ರ, ನಗದು ಪುಸ್ತಕ ಮುಂತಾದವು ಪೂರೈಕೆ ಇಂಗ್ಲಿಷ್ ಮಾಧ್ಯಮ ಶಾಲೆಯ ಸಮಸ್ಯೆಗಳು ಶಿಶು ಪಾಲನಾ ರಜೆ ಮಂಜೂರಿ ವಾರ್ಷಿಕ ಬಡ್ತಿ, ಕಾಲಮಿತಿ ಬಡ್ತಿ, ವೈದ್ಯಕೀಯ ಮರು ವೆಚ್ಚ ಪಾವತಿ ಮುಂತಾದವುಗಳ ಬಾಕಿ ಅರಿಯರ್ಸ್ ಕುರಿತು ಚರ್ಚೆ ಮಾಡಲಾಯಿತು
ಪ್ರಧಾನ ಗುರುಗಳ,ಶಿಕ್ಷಕರ ಸಭೆಗಳನ್ನು ಮುಖಾಮುಖಿ ಏರ್ಪಡಿಸುವುದು
ಎಸ್ ಎಸ್ ಎ/ ಸಿ ಆರ್ ಪಿ,/ ಬಿ ಆರ್ ಪಿ ಟೇಬಲ್ ಬಾಕಿ ಸಮಸ್ಯೆಗಳು ಸಂಘದ ಪದಾಧಿಕಾರಿಗಳ ನಿಯೋಗದಲ್ಲಿ ಅಧ್ಯಕ್ಷರಾದ ಕಾಶಪ್ಪ ದೊಡವಾಡ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಗೌರವಾಧ್ಯ ಕ್ಷರಾದ ಅಲ್ಲಾಭಕ್ಷ ನದಾಫ, ಹಿರಿಯ ಮುಖ್ಯೋ ಪಾಧ್ಯಾಯರಾದ ಎಂ ಎಲ್ ಪೂಜಾರ, ಮಹಾದೇವಿ ದೊಡ್ಡಮನಿ,NPS ರಾಜ್ಯ ಸಹಕಾ ರ್ಯದರ್ಶಿಗಳಾದ ರಾಜು ಮಾಳವಾಡ, ಉಪಾ ಧ್ಯಕ್ಷರುಗಳಾದ ಎಸ್ ಎಸ್ ಧನಿಗೊಂಡ, ಸುರೇಶ್ ಪೂಜಾರ, ಸಂಘಟನಾ ಕಾರ್ಯದರ್ಶಿಗಳಾದ ರಮೇಶ್ ಸನಮನಿ, ಹನುಮಂತ ಡೊಕ್ಕಣ್ಣವರ, ಜಿಲ್ಲಾಧ್ಯಕ್ಷರಾದ ಆರ್ ಎಸ್ ಹಿರೇಗೌಡರ, ಐ ಎಚ್ ನದಾಫ್,ಸಂಘಟನಾ ಕಾರ್ಯದರ್ಶಿಗ ಳಾದ ರಾಜು ದೊಡ್ಡಮನಿ, ಎಸ್ ಟಿ ಕುರಿ, ವೀರೇಶ್ ಬಿಲ್ದಂಡಗಿ, ಜಿಲ್ಲಾ ಉಪಾಧ್ಯಕ್ಷರಾದ ಸಿ.ಎಂ ಬುಡನ ಖಾನ್, ಹಾಗೂ ಈ ಸಂದರ್ಭ ದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ್ ಸವಾಯಿ, ಅರುಣ್ ನವಲೂರ್ ಹಾಜರಿದ್ದರು.
ವರದಿ ಚಂದ್ರಶೇಖರ ತಿಗಡಿ ಕಾರ್ಯದರ್ಶಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..
ಸುದ್ದಿ ಸಂತೆ ನ್ಯೂಸ್ ಧಾರವಾಡ…..