ಧಾರವಾಡ –
ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.
ಇನ್ನೂ ಈ ಒಂದು ಅಪಘಾತದಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು ಧಾರವಾಡ ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಈ ಒಂದು ಘಟನೆ ನಡೆದಿದೆ.
ಗಂಗಾಧರ (೨೨) ಹಾಗೂ ನಾಗರಾಜ್(೨೨) ಸಾವನ್ನಪ್ಪಿದ ಬೈಕ್ ಸವಾರರಾಗಿದ್ದು ಇಬ್ಬರು ಧಾರವಾಡ ತಾಲೂಕಿನ ಕೋಟೂರು ಗ್ರಾಮದ ವರಾಗಿದ್ದಾರೆ.ವಾಹನ ಡಿಕ್ಕಿಯ ನಂತರ ಹೆದ್ದಾರಿ ಮೇಲೆಯೇ ಜೀವ ಬಿಟ್ಟಿದ್ದಾರೆ ಈ ಇಬ್ಬರು ಗೆಳೆಯರು.
ಇನ್ನೂ ಈ ಒಂದು ಅಪಘಾತದ ಸುದ್ದಿ ಯನ್ನು ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.
ಅನಿಲಕುಮಾರ ಉಳವನ್ನವರ ಸುದ್ದಿ ಸಂತೆ ನ್ಯೂಸ್ ಗರಗ…..