ಹುಬ್ಬಳ್ಳಿ –
ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವನ ಮೇಲೆ ಇಬ್ಬರು ಮನಬಂದಂತೆ ಹಲ್ಲೆ ಮಾಡಿ ಅವಾಚ್ಯ. ವಾಗಿ ನಿಂದನೆ ಮಾಡಿರುವ ಘಟನೆ ನಗರದ ರೈಲ್ವೆ ವರ್ಕ್ ಶಾಪ್ ನಲ್ಲಿ ನಡೆದಿದೆ. ಹೌದು ನಗರದ ರೈಲ್ವೆ ಇಲಾಖೆಯ ಸಿಬ್ಬಂದಿ ಡಿ. ಬುಜ್ಜಿಗನ್ನಾ ಅವರ ಮೇಲೆ ನರೇಂದ್ರ ಜಾಧವ ಹಾಗೂ ಮಂಜುನಾಥ ನಾಲವಾಡ ಎಂಬಾತರೇ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 20 ರಂದು ಕರ್ತವ್ಯನಿರ್ವಹಿಸಿ ಮರಳಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬುಜ್ಜಿಗನ್ನಾ ಅವರ ಮೇಲೆ ಮನಬಂದಂತೆ ಹಲ್ಲೆ ಮಾಡಿ ಹಾಗೂ ಅಶ್ಲೀಲವಾಗಿ ನಿಂದನೆ ಮಾಡಿದ್ದು, ಈ ಕುರಿತಂತೆ ಕೇಶ್ವಾಪೂರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರ ರೊಂದಿಗೆ ಬುಜ್ಜಿಗನ್ನಾ ಮಾತನಾಡಿ ಕ್ಲುಲಕ ಕಾರಣಕ್ಕಾಗಿ ನನ್ನ ಮೇಲೆ ನರೇಂದ್ರ ಜಾಧವ ಹಾಗೂ ಮಂಜುನಾಥ ನಾಲವಾಡ ಅವರು ಹಲ್ಲೆ ಮಾಡಿದ್ದು, ಅವರ ವಿರುದ್ಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು.
ಇನ್ನೂ ಈ ಘಟನೆ ಸೆಪ್ಟೆಂಬರ್ 20 ರಂದು ಜರುಗಿದ್ದು ನನಗೆ ಅವಾಚ್ಯವಾಗಿ ನಿಂದನೆ ಮಾಡಿದರಲ್ಲದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಆ ದೂರನ್ನು ವಾಪಾಸ್ ತೆಗೆದುಕೊಳ್ಳುವಂತೆ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ.
ನನಗೆ ಏನಾದರೂ ಜೀವಕ್ಕೆ ಹಾನಿಯಾದರೇ ನರೇಂದ್ರ ಜಾಧವ ಹಾಗೂ ಮಂಜುನಾಥ ನಾಲವಾಡ ಅವರೇ ಕಾರಣ ಎಂದು ಗಂಭೀರ ವಾಗಿ ದೂರಿದ್ದಾರೆ.ಇನ್ನು ರೈಲ್ವೇ ಇಲಾಖೆಯ ಅಧಿಕಾರಿಗಳು ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಸಹಿತ ಇನ್ನೂ ಕ್ರಮ ತಗೆದುಕೊಂ ಡಿಲ್ಲ. ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಮಾಧ್ಯಮ ಮುಂದೆ ತಮ್ಮ ಅಳಲು ತೋಡಿ ಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..