ನವದೆಹಲಿ –
ಸರ್ಕಾರಿ ನೌಕರರಿಗೆ ಪಿಂಚಣಿದಾರರಿಗೆ ಭರ್ಜರಿ ಗಿಪ್ಟ್ – ನವರಾತ್ರಿಗೂ ಮುನ್ನವೇ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ ಹೌದು ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಭರ್ಜರಿಯಾದ ಗಿಪ್ಟ್ ನ್ನು ನೀಡಿದ್ದು ಹಬ್ಬಕ್ಕೂ ಮುನ್ನವೇ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಮಾಡಲು ಮುಂದಾಗಿದೆ.ಇದರೊಂದಿಗೆ ಕೋಟ್ಯಾಂತರ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರದ ಗಿಫ್ಟ್ ನೀಡಲು ಮುಂದಾಗಿದೆ.
ನವರಾತ್ರಿ ಹಬ್ಬಕ್ಕೂ ಮುನ್ನ ಮೋದಿ ಸರ್ಕಾರ ಕೋಟ್ಯಂತರ ಉದ್ಯೋಗಿಗಳು ಮತ್ತು ಪಿಂಚಣಿ ದಾರರಿಗೆ ಉಡುಗೊರೆಯನ್ನು ನೀಡಲಿದೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.ಈ ಸಭೆಯಲ್ಲಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಮುಖ ಘೋಷಣೆಯ ಭರವಸೆಯ ನಿರ್ಧಾ ರವನ್ನು ಕೈಗೊಳ್ಳಲಿಗೆ.ತುಟ್ಟಿಭತ್ಯೆಯನ್ನ ಶೇಕಡಾ 42 ರಿಂದ 46ಕ್ಕೆ ಹೆಚ್ಚಿಸುವ ಬಲವಾದ ಸಾಧ್ಯತೆ ಇದೆ. ತುಟ್ಟಿಭತ್ಯೆ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ.
ನೌಕರರು ಜುಲೈನಿಂದ ಸೆಪ್ಟೆಂಬರ್ ತಿಂಗಳ ಬಾಕಿಯೊಂದಿಗೆ ಅಕ್ಟೋಬರ್ ತಿಂಗಳ ವೇತನ ವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ. ಈ ನಿರ್ಧಾರದಿಂದ 47 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗ ಲಿದೆ ಕಳೆದ ವರ್ಷ ನವರಾತ್ರಿಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೋದಿ ಸರ್ಕಾರ ತುಟ್ಟಿಭತ್ಯೆಯನ್ನು ಹೆಚ್ಚಿಸಿತ್ತು.
ತುಟ್ಟಿಭತ್ಯೆಯನ್ನು ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಇದನ್ನು ಕಾರ್ಮಿಕ ಬ್ಯೂರೋ ಮಾಸಿಕವಾಗಿ ಬಿಡುಗಡೆ ಮಾಡುತ್ತದೆ. ಹಣದುಬ್ಬರದ ಹೊರೆಯೊಂದಿಗೆ ಹೋರಾಡುತ್ತಿ ರುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಸಾಕಷ್ಟು ಪರಿಹಾರವನ್ನು ಪಡೆಯುವ ನಿರೀಕ್ಷೆ ಯಿದೆ.
ಪ್ರಸ್ತುತ ಡಿಎ ಮಾಸಿಕ 7,560 ರೂ.ಗಳ ಹೆಚ್ಚಳ ವನ್ನು 42% ನಲ್ಲಿ ಒದಗಿಸುತ್ತದೆ ಹೊಸ ಡಿಎ ದರವು 46% ಆಗಿದ್ದು ಈ ಮಾಸಿಕ ಹೆಚ್ಚಳ ವು 8,280 ರೂ.ಗೆ ಏರಿಕೆಯಾಗಿದೆ.ಪ್ರಸ್ತುತ ಡಿಎ ಯಲ್ಲಿ 42% ರಷ್ಟು ಮಾಸಿಕ ಆದಾಯವು 23,898 ರೂ.ಗೆ ಹೆಚ್ಚಾಗುತ್ತದೆ, 46% ರಿಂದ 26,174 ರೂ.ಗೆ ಏರಿಕೆಯಾಗಲಿದ್ದು ಏನೇನು ನಿರ್ಧಾರಗಳು ಹೊರಬೀಳಲಿವೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..