ಶಿವಮೊಗ್ಗದಲ್ಲಿ ನಡೆದ ದೊಡ್ಡ ಸ್ಪೋಟಕವನ್ನು ನಮ್ಮ ಜೀವನದಲ್ಲಿ ನೋಡಿಲ್ಲ ಕೇಳಿಲ್ಲ – ಪವರ್ ಪುಲ್ ಸ್ಪೋಟಕ ಕುರಿತು‌ ತನಿಖೆ ಯಾಗುತ್ತಿದೆ

Suddi Sante Desk

ಶಿವಮೊಗ್ಗ –

ಶಿವಮೊಗ್ಗದಲ್ಲಿ ನಿನ್ನೆ ತಡರಾತ್ರಿ ನಡೆದ ದೊಡ್ಡ ಪ್ರಮಾಣದ ನಡೆದ ಸ್ಪೋಟಕವನ್ನು ನನ್ನ ಜೀವನ ದಲ್ಲಿ ಯಾವತ್ತು ನೋಡಿಲ್ಲ ಕೇಳಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತ ನಾಡಿದ ಅವರು ಸ್ಪೋಟಕ ದಲ್ಲಿ ಅಮಾಯಕ ವಾಗಿ ಸಾವಿಗೀಡಾದ ಕಾರ್ಮಿಕರಿಗೆ ವಿಷಾದವನ್ನು ವ್ಯಕ್ತಪಡಿಸಿದರು.

ಜಿಲ್ಲೆಯವರಾದ ನಾವು ಇಲ್ಲಿಯೇ ಹುಟ್ಟಿ ಬೆಳೆದು ನಮಗೆ ಈವರೆಗೆ ಇಂಥಹ ದೊಡ್ಡ ಪ್ರಮಾಣದ ಸ್ಪೋಟವನ್ನು ಕೇಳಿಲ್ಲ ನಮ್ಮ ಜೀವನದಲ್ಲಿ ನೊಡಿಲ್ಲ ಎಂದರು.ಇನ್ನೂ ಸ್ಪೋಟಕಕ್ಕೆ ಕಾರಣಗಳೇನು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿನ ಸ್ಪೋಟಕ ವಸ್ತುವನ್ನು ಹೇಗೆ ಎಲ್ಲಿಂದ ತಗೆದುಕೊಂಡು ಬರಲಾಗುತ್ತಿತ್ತು ಹೇಗೆ ಸ್ಪೋಟವಾಗಿದೆ ಹೀಗೆ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ಸ್ಥಳಕ್ಕೆ ಬಂದು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ವರದಿ ಬಂದ ಮೇಲೆ ಈ ಒಂದು ದೊಡ್ಡದಾದ ಪ್ರಮಾಣದ ಅವಘಡಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಬೇಕಿದೆ.ಸ್ಥಳಕ್ಕೆ ತಜ್ಞರು ಬರುತ್ತಿದ್ದಾರೆ. ಸ್ಪೋಟ ದೊಡ್ಡ ಪ್ರಮಾಣದಲ್ಲಿ ಆಗಿದೆ ಎಂದರು.

ಪವರ್ ಪುಲ್ ಸ್ಪೋಟ ಹೇಗೆ ಆಯಿತು ಕಾರಣಗಳಾದರು ಏನು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದರು. ಇನ್ನೂ ಈ ಒಂದು ಸ್ಪೋಟಕ್ಕೆ ನಮ್ಮ ಮನೆಯಲ್ಲೂ ಕಿಟಕಿ ಬಾಗಿಲುಗಳು ಅಲುಗಾಡಿವೆ ಅಕ್ರಮವಾಗಿ ನಡೆಯುತ್ತಿರುವ ಕುರಿತಂತೆ ಕ್ರಮವನ್ನು ಕೈಗೊಳ್ಳಲಾಗಿದೆ. ಇಷ್ಟೊಂದು ಸ್ಪೋಟಕಗಳು ಎಲ್ಲಿಂದ ಹೇಗೆ ಬಂದಿದ್ದು ತನಿಖೆಯಾಗುತ್ತಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.