ಧಾರವಾಡ –
ಧಾರವಾಡದಲ್ಲಿ ಮತ್ತೊಂದು ಕೊಲೆ – ಬೆಳ್ಳಂ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬರುವಾಗ ಕರೆವ್ವ. ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಬೆಳ್ಳಂ ಬೆಳಿಗ್ಗೆ ವೃದ್ದೆಯೊಬ್ಬರನ್ನು ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.ನಗರದ ನವಲೂರಿನಲ್ಲಿ ಈ ಈ ಒಂದು ಕೊಲೆ ನಡೆದಿದ್ದು ಕರೆವ್ವ ಈರಬಗೇರಿ ಕೊಲೆಯಾದ ಮಹಿಳೆಯಾಗಿ ದ್ದಾಳೆ.ವೃದ್ಧೆಯ ಕೊಲೆ ಮಾಡಿ ಪರಾರಿಯಾಗಿ ದ್ದಾರೆ
ದುಷ್ಕರ್ಮಿಗಳು.ಧಾರವಾಡ ನವಲೂರ ಬಡಾವಣೆಯ ಮುಖ್ಯ ರಸ್ಥೆಯಲ್ಲಿ ಈ ಒಂದು ಘಟನೆ ನಡೆದಿದೆ.ಕರೆವ್ವ ಈರಬಗೇರಿ (58) ಕೊಲೆಯಾದ ವೃದ್ಧೆಯಾಗಿದ್ದು ಆಸ್ತಿ ವಿಚಾರವಾಗಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು ಹತ್ಯೆಯನ್ನು ಮಾಡಿ ಸ್ಥಳದಿಂದ ಎಸ್ಕೇಫ್ ಆಗಿದ್ದಾರೆ ದುಷ್ಕರ್ಮಿಗಳು. ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಧ್ಯ ವೃದ್ಧೆಯ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳುವಾಗ ಈ ಒಂದು ಕೊಲೆ ನಡೆದಿದೆ.
ಏಕಾಂಗಿಯಾಗಿ ಜೀವನವನ್ನು ನಡೆಸುತ್ತಿದ್ದರು ಈ ಒಂದು ವೃದ್ಧೆ.ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಕಳೆದ ಒಂದು ವಾರದಲ್ಲಿ ಈ ಒಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ನಾಲ್ಕು ಕೊಲೆಗಳು ನಡೆದಿದ್ದು
ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು ಒಂದು ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದ್ದು ಇಧು ಪೊಲೀಸರ ಕಾರ್ಯ ವೈಖರಿ ಯನ್ನು ತೋರಿಸುತ್ತಿದ್ದು ವಿದ್ಯಾಗಿರಿ ಪೊಲೀಸರು ಏನು ಮಾಡ್ತಾ ಇದ್ದಾರೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..