ಧಾರವಾಡ –
ವಿದ್ಯಾಕಾಶಿಯಲ್ಲಿ ಹತ್ಯೆ ಗಳು ನಿಲ್ಲುವ ಲಕ್ಷ ಗಳು ಕಾಣುತ್ತಿಲ್ಲ ಒಂದರ ಮೇಲೊಂದರಂತೆ ಹತ್ಯೆಗಳು ನಡೆಯುತ್ತಿದ್ದು ನಗರದಲ್ಲಿ ಮತ್ತೊಂದು ಕೊಲೆ ಯಾಗಿದೆ.ಹೌದು ನಗರದಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದ್ದು ಭೀಕರ ವಾಗಿ ಹತ್ಯೆ ಮಾಡಿದ್ದಾನೆ ದುಷ್ಕರ್ಮಿಯೊಬ್ಬ.ಒಂದೇ ವಾರದಲ್ಲಿ ಧಾರವಾಡ ದಲ್ಲಿ ಐದು ಕೊಲೆಗಳು ನಡೆದಿವೆ.ಇದರಿಂದಾಗಿ ಬೆಚ್ಚಿಬಿದ್ದಿದೆ ವಿದ್ಯಾ ಕಾಶಿ ಧಾರವಾಡ.
ತಡರಾತ್ರಿ ಮತ್ತೊಂದು ಮರ್ಡರ್ ನಡೆದಿದ್ದು ಧಾರವಾಡದ ನಗರದ ಭೋವಿಗಲ್ಲಿ ಯಲ್ಲಿ ಯುವಕನ ಹತ್ಯೆಯಾಗಿದೆ.ವಿಮಲ್ ಎಗ್ ರೈಸ್ ನಲ್ಲಿ ಕುಕ್ ಆಗಿದ್ದ ಫಕ್ಕಿರೇಶ್ ಪ್ಯಾಟಿ ಹತ್ಯೆಯಾದ ಯುವಕನಾದವನಾಗಿದ್ದಾನೆ.
ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದಾಂಡೇಲಿ ಮೂಲದ ಕನ್ಯಯ್ಯ ಕೇ ಎನ್ನುವವ ನಿಂದಲೇ ಈ ಒಂದು ಹತ್ಯೆ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊನೆಯಲ್ಲಿ ಕೊಲೆ ಯಲ್ಲಿ ಅಂತ್ಯವಾಗಿದೆ.ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಯನ್ನು ಮಾಡತಾ ಇದ್ದಾರೆ.ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..