ಧಾರವಾಡ –
ಸಂಸದ ಕ್ರೀಡಾ ಮಹೋತ್ಸವದ ಕಬಡ್ಡಿ ಪಂದ್ಯಾವಳಿಯ ಲಾಂಛನ ಬಿಡುಗಡೆ – ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ನರೇಂದ್ರ ಗ್ರಾಮದಲ್ಲಿ ಫೆಬ್ರುವರಿ 20 ರಿಂದ ನಡೆಯಲಿದೆ ಪಂದ್ಯಾವಳಿ…..ಮಾಜಿ ಶಾಸಕರಾದ ಸೀಮಾ ಮಸೂತಿ,ಅಮೃತ ದೇಸಾಯಿ,ಶಂಕರ ಮುಗದ,ಶಂಕರ ಕೋಮಾರ್ ದೇಸಾಯಿ ಸೇರಿದಂತೆ ಹಲವು ಗಣ್ಯರಿಂದ ಬಿಡುಗಡೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಂಸದ ಕ್ರೀಡಾ ಮಹೋತ್ಸವದ ಅಂಗವಾದಿ ಧಾರವಾಡ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯಾವಳಿಗಳು ನಡೆಯು ತ್ತಿವೆ ಹೌದು ಈಗಾಗಲೇ ಜಿಲ್ಲೆಯ ಬೇರೆ ಬೇರೆ ವಿಧಾನ ಸಭಾ ಕ್ಷೇತ್ರದಲ್ಲಿ ಈ ಒಂದು ಕಬಡ್ಡಿ ಪಂದ್ಯಾವಳಿ ನಡೆದಿದ್ದು ಫೆಬ್ರುವರಿ 20 ರಿಂದ ಎರಡು ದಿನಗಳ ಕಾಲ ಧಾರವಾಡದ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು
ಇನ್ನೂ ಈ ಒಂದು ಕಾರ್ಯಕ್ರಮದ ಲಾಂಛನ ವನ್ನು ಧಾರವಾಡದಲ್ಲಿ ಬಿಡುಗಡೆ ಮಾಡಲಾ ಯಿತು.ಹೌದು ನಗರದ ಪ್ರವಾಸಿ ಮಂದಿರದಲ್ಲಿ ಕಬಡ್ಡಿ ಪಂದ್ಯಾವಳಿಯ ಲಾಂಛನವನ್ನು ಬಿಡು ಗಡೆ ಮಾಡಲಾಯಿತು.ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಪ್ರಸ್ತುತ ಪಡಿಸುವ ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ಧಾರವಾಡ ಗ್ರಾಮೀಣ 71 ರಲ್ಲಿ ಫೆಬ್ರವರಿ 20 & 21 ರಂದು ನರೇಂದ್ರ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ
ಕಬಡ್ಡಿ ಪಂದ್ಯಾವಳಿಯ ಲಾಂಛನವನ್ನು ಅನಾ ವರಣ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಮೃತ ದೇಸಾಯಿ ಮಾಜಿ ಶಾಸಕಿ ಶ್ರೀಮತಿ ಸೀಮಾ ಮಸೂತಿ , ಶಂಕರ್ ಮುಗದ,ಗುರುನಾಥ್ ಗೌಡ ಗೌಡರ,ಈರೇಶ್ ಅಂಚಟಗೇರಿ , ಶಂಕರ್ ಕೋಮಾರ್ ದೇಸಾಯಿ, ರುದ್ರಪ್ಪ ಅರಿವಾಳ, ಶಂಕರ್ ಶೇಳಕೆ,
ಯಲ್ಲಪ್ಪ ಜಾನಕುನವರ್ ಸೇರಿದಂತೆ ಅನೇಕ ಪ್ರಮುಖರು ಹಾಗೂ ಯುವ ಮಿತ್ರರು ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅನಿಲ ಉಳವನ್ನವರ ಸುದ್ದಿ ಸಂತೆ ನ್ಯೂಸ್ ಧಾರವಾಡ.