ಧಾರವಾಡ –
ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೇಕ್ಟರ್ ಜವಾಬ್ದಾರಿ ವಹಿಸಿಕೊಂಡ ಶ್ರೀನಿವಾಸ ಮೇಟಿ – ನೂತನ ಚಾರ್ಲಿಯನ್ನು ಸ್ವಾಗತಿಸಿ ಬರಮಾಡಿಕೊಂಡ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಹೌದು
ಹೌದು ಧಾರವಾಡ ಸಂಚಾರಿ ಪೊಲೀಸ್ ಠಾಣೆಗೆ ಹೊಸ ಪೊಲೀಸ್ ಅಧಿಕಾರಿ ಆಗಮಿಸಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯದಲ್ಲಿದ್ದ ಮಲ್ಲನಗೌಡ ನಾಯ್ಕರ್ ವರ್ಗಾವಣೆಗೊಂಡಿದ್ದಾರೆ.ಬರೊಬ್ಬರಿ 3 ವರ್ಷ 8 ತಿಂಗಳಕಾಲ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದ ಇವರನ್ನು ವರ್ಗಾವಣೆ ಮಾಡಲಾಗಿದೆ.
ದಕ್ಷತೆ ಮತ್ತು ಕರ್ತವ್ಯದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಮಲ್ಲನಗೌಡ ನಾಯ್ಕರ್ ಧಾರವಾಡ ಜನತೆಯ ಮನದಲ್ಲಿ ಒಳ್ಳೇಯ ಕೆಲಸ ಕಾರ್ಯ ಗಳ ಮೂಲಕ ಉಳಿದುಕೊಂಡಿದ್ದಾರೆ.ಸಧ್ಯ ಇವರ ಈ ಒಂದು ವರ್ಗಾವಣೆಯ ಹಿನ್ನಲೆಯಲ್ಲಿ ಇವರ ಸ್ಥಳಕ್ಕೇ ನೂತನ ಪೊಲೀಸ್ ಅಧಿಕಾರಿಯಾಗಿ ಶ್ರೀನಿವಾಸ ಮೇಟಿಯವರನ್ನು ವರ್ಗಾವಣೆ ಮಾಡಲಾಗಿದ್ದು
ಸಧ್ಯ ಠಾಣೆಗೆ ನೂತನ ಪೊಲೀಸ್ ಅಧಿಕಾರಿ ಯಾಗಿ ಶ್ರೀನಿವಾಸ ಮೇಟಿ ಆಗಮಿಸಿದ್ದಾರೆ. ಕಚೇರಿಗೆ ನೂತನ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿಯವರು ಆಗಮಿಸುತ್ತಿದ್ದಂತೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬರಮಾಡಿಕೊಂಡರು.
ಇನ್ನೂ ಶ್ರೀನಿವಾಸ ಮೇಟಿ ದಕ್ಷತೆಯೊಂದಿಗೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದು ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾ ಗಿದ್ದಾರೆ.ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿರುವ ಇವರು ಸಧ್ಯ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಜವಾಬ್ದಾರಿ ಯನ್ನು ವಹಿಸಿಕೊಂಡಿದ್ದು
ಇನ್ನಷ್ಟು ಒಳ್ಳೊಳ್ಳೇಯ ಕೆಲಸ ಕಾರ್ಯಗಳನ್ನು ಮಾಡಿ ಜನರ ಪ್ರೀತಿ ವಿಶ್ವಾಸದೊಂದಿಗೆ ಮತ್ತಷ್ಟು ಹೆಸರನ್ನು ಮಾಡಲಿ ಎಂಬೊದು ನಮ್ಮ ಆಶಯ ವಾಗಿದೆ.ಏನೇ ಆಗಲಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ನೂತನ ಚಾರ್ಲಿ ಯವರಿಗೆ ಆಲ್ ದಿ ಬೆಸ್ಟ್.
ಸುದ್ದಿ ಸಂತೆ ನ್ಯೂಸ್ ಧಾರವಾಡ…..