ಕಲಘಟಗಿ –
ಕಲಘಟಗಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೆದಾರ – ಖಾತೆ ಬದಲಾವಣೆಗೆ 45 ಸಾವಿರ ಗೆ ಬೇಡಿಕೆ ಇಟ್ಟಿದ್ದ ಸುರೇಶ ಅಡವಿ ಟ್ರ್ಯಾಪ್
ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿರಸ್ತೆದಾರರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಘಟಗಿಯಲ್ಲಿ ನಡೆದಿದೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಈ ಒಂದು ಟ್ರ್ಯಾಪ್ ಆಗಿದೆ.
ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಸುರೇಶ ಅಡವಿ ಲೋಕಾಯುಕ್ತ ಬಲೆಗೆ ಬಿದ್ದವರಾದವ ರಾಗಿದ್ದಾರೆ.ವ್ಯಕ್ತಿಯೊಬ್ಬರ ಖಾತೆಯನ್ನು ಬದಲಾ ವಣೆ ಮಾಡುವ ವಿಚಾರ ಕುರಿತಂತೆ 50 ಸಾವಿರ ರೂಪಾಯಿಗೆ ಬೇಡಿಕೆಯನ್ನು ಇಟ್ಟಿದ್ದರು.ಹೀಗಾಗಿ ಈ ಕುರಿತಂತೆ ಲೋಕಾಯುಕ್ತರಿಗೆ ದೂರನ್ನು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಇತ್ತ ಕಚೇರಿ ಯಲ್ಲಿ ಹಣವನ್ನು ತಗೆದುಕೊಳ್ಳುವಾಗ ಸುರೇಶ ಅಡಿವಿ ಲೋಕಾಯುಕ್ತ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಎಸ್ಪಿ ಶಂಕರ ರಾಗಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಮತ್ತು ಟೀಮ್ ನವರು ಈ ಒಂದು ಕಾರ್ಯಾಚರಣೆಯನ್ನು ಮಾಡಿದ್ದಾರೆ.ಸಧ್ಯ ಟ್ರಾಪ್ ಆಗಿರುವ ಸುರೇಶ್ ಅಡಿವಿ ಯನ್ನು ವಶಕ್ಕೆ ತಗೆದುಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.ಇನ್ನೂ ಈ ಒಂದು ಕಾರ್ಯಾ ಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಬಸಗೌಡ ಚ ಪಾಟೀಲ್, ಪ್ರಭುಲಿಂಗಯ್ಯ ಹಿರೇಮಠ, ಟಿ.ಎ ಸೊಪ್ಪಿ, ವಿ.ಎಸ್. ದೇಸಾಯಿ ಗೌಡ್ರ, ಎಸ್.ಇ.ಲಕ್ಕಮ್ಮನವರ,ಎಮ್ ಎಮ್ ಶಿವನಾಯ್ಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..