ಧಾರವಾಡ –
ಕ್ಷೇತ್ರದಲ್ಲಿನ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ ಪಾಲಿಕೆ ಸದಸ್ಯ ನಿತೀನ ಇಂಡಿ ಬಡಾವಣೆಯ ಗುರು ಹಿರಿಯರೊಂದಿಗೆ ಹೊಸ ಅಭಿವೃದ್ದಿ ಕಾಮಗಾರಿಗೆ ಪೂಜೆ ಮಾಡಿದ ಯುವ ನಾಯಕ ಹೌದು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 5 ರಲ್ಲಿ ಹೊಸ ಹೊಸ ಅಭಿವೃದ್ದಿ ಕಾಮ ಗಾರಿಗಳು ನಡೆಯುತ್ತಿವೆ.ವಾರ್ಡ್ ಗೆ ನಿತೀನ್ ಇಂಡಿ ಪಾಲಿಕೆಯ ಸದಸ್ಯರಾಗಿ ಬಂದ ಮೇಲೆ ಹೊಸ ಹೊಸ ಕೆಲಸ ಕಾರ್ಯಗಳು ನಡೆಯು ತ್ತಿದ್ದು ಈಗಾಗಲೇ ಹಲವಾರು ಕೆಲಸ ಕಾರ್ಯ ಗಳನ್ನು ಮಾಡಿರುವ ನಿತೀನ ಇಂಡಿಯವರು ಸಧ್ಯ ಮತ್ತೊಂದು ಹೊಸ ಕಾಮಗಾರಿಗೆ ಭೂಮಿ ಪೂಜೆ ಯನ್ನು ಮಾಡಿದರು.
ಹೌದು ಧಾರವಾಡ ಶಹರದ ವಾರ್ಡ ನಂಬರ್ 5 ರಲ್ಲಿ ಬರುವ ಮಣಿಕಂಠನಗರದ 3ನೇ ಮತ್ತು 7ನೇ ಕ್ರಾಸ್ ನಲ್ಲಿ ತೆರೆದ ಚರಂಡಿ ಕಾಮಗಾರಿಗೆ ಭೂಮಿ ಪೂಜೆಯನ್ನು ಮಾಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಅನುದಾನದಲ್ಲಿ ತೆರೆದ ಚರಂಡಿ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಲಾ ಯಿತು
ಈ ಸಂದರ್ಭದಲ್ಲಿ ಐದನೇ ವಾರ್ಡಿನ ಗುರು-ಹಿರಿಯರು ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..