ಹುಬ್ಬಳ್ಳಿ –
ಶಿಶುನಾಳ ಶರೀಫರ ಜಾತ್ರೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಡೋಲು ಬಾರಿಸಿ ಸಂಭ್ರಮಿಸಿ ಜಾತ್ರೆಯಲ್ಲಿ ಸಾರ್ವಜನಿಕರೊಂದಿಗೆ ಸಂಭ್ರಮಿಸಿದ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.ಹೌದು ಸಧ್ಯ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಬಿಡುವಿಲ್ಲದ ಕೆಲಸ ಕಾರ್ಯಗಳೊಂದಿಗೆ ಸುತ್ತಾಟದ ನಡುವೆಯೂ ಕೂಡಾ ಪ್ರಹ್ಲಾದ್ ಜೋಶಿಯವರು ಧಾರವಾಡ ಲೋಕಸಭಾ ಕ್ಷೇತ್ರದ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿನ ಈ ಒಂದು ಜಾತ್ರೆಯಲ್ಲಿ ಪಾಲ್ಗೊಂಡರು.
ಸಂತ ಶಿಶುನಾಳ ಶರೀಫ ಶಿವಯೋಗಿಗಳು ಹಾಗೂ ಗುರು ಗೋವಿಂದ ಭಟ್ಟರ ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಅವರು ಪಾಲ್ಗೊಂಡು ಪೂಜೆ ಸಲ್ಲಿಸಿದ್ದು ಕಂಡು ಬಂದಿತು.ನಂತರ ಡೋಲು ಬಾರಿಸಿ ಭಕ್ತರೊಂದಿಗೆ ಸಚಿವರು ಸಂಭ್ರಮಿಸಿ ದರು
ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಸಂತ ಶಿಶುನಾಳ ಶರೀಫರು ತತ್ವಪದಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಮೂಲಕ ಸಮಾಜದ ಉನ್ನತಿಗಾಗಿ ಶ್ರಮಿಸಿದ ವರು ಎಂದು ಸ್ಮರಿಸಿ ಶರೀಫರನ್ನು ಶಿಶುನಾಳದಲ್ಲಿ ಸರ್ವ ಧರ್ಮೀಯರು ಪೂಜಿಸಿ ಆರಾಧಿಸುತ್ತಿರು ವುದು ವಿಶೇಷ ಎಂದು ತಿಳಿಸಿದರು.
ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಸಚಿವರಿಗೆ ಪಕ್ಷದ ಪ್ರಮುಖರು ಗ್ರಾಮದ ಹಿರಿಯರು ಹಾಗೂ ಕಾರ್ಯಕರ್ತರು ಸಾಥ್ ನೀಡಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..