ಧಾರವಾಡ –
ಮರೇವಾಡ, ತಿಮ್ಮಾಪೂರ ಗ್ರಾಮದಲ್ಲಿ ವಿನೋದ್ ಅಸೂಟಿ ಭರ್ಜರಿ ಪ್ರಚಾರ
ಹಾರೊಬೆಳವಡಿ ಸಂಸದರ ಆದರ್ಶ ಗ್ರಾಮ ಯಾವಾಗ ಆಗುತ್ತೆ ಎಂದು ಪ್ರಶ್ನೆ ಮಾಡಿದ ವಿನೋದ ಅಸೂಟಿ ಹೌದು
ಹಾರೊಬೆಳವಡಿ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆಮಾಡಿ ಸುಂದರ ಹಾಗೂ ಸ್ವಚ್ಛವಾದ ಗ್ರಾಮ ಮಾಡ ಬೇಕಿತ್ತು. ಆದರೆ ಪ್ರಹ್ಲಾದ ಜೋಶಿ ಸಾಹೇಬರು ಆ ಹಳ್ಳಿಗೆ ಎಷ್ಟು ಸಲ ಭೇಟಿ ನೀಡಿ ಎಷ್ಟು ಅನುದಾನ ತಂದು ಕೆಲಸ ಮಾಡಿದರೊ ಅವರೇ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವ್ಯಂಗ್ಯವಾಡಿದರು.
ತಿಮ್ಮಾಪೂರ ಹಾಗೂ ಮರೇವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯ ಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಂಸದರ ಆದರ್ಶ ಗ್ರಾಮ ಈ ಶಬ್ದಗಳು ನಿಮಗೆ ನೆನಪಿರಬೇಕು ಅಲ್ವಾ ಇದು ಬಿಜೆಪಿಯ ಬಣ್ಣ ಬಣ್ಣದ ಯೋಜನೆಯ ಒಂದು ಹೆಸರಷ್ಟೇ ಆದ್ದ ರಿಂದ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ ಮುಂತಾದ ಗ್ಯಾರಂಟಿ ಗಳನ್ನು ರಾಜ್ಯ ಸರ್ಕಾರ ಭರವಸೆ ಕೊಟ್ಟಂತೆ ಹತ್ತು ತಿಂಗಳೊಳಗೆ ಎಲ್ಲಾ ಈಡೇರಿಸಿದೆ. ಕೇಂದ್ರದ ಕಾಂಗ್ರೆಸ್ ನಾಯಕರು ಸುಮಾರು 25 ಗ್ಯಾರಂಟಿ ಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀವು ಅಧಿಕಾರ ನೀಡಿದರೆ ಖಂಡಿತವಾಗಿಯೂ ಎಲ್ಲಾ ಭರವಸೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡ್ರ, ಈಶ್ವರ ಶಿವಳ್ಳಿ, ಗಿರಿಮಲ್ಲಯ್ಯ ನಂದಿಕೋಲಮಠ, ಸಿದ್ದಪ್ಪ ಪ್ಯಾಟಿ ಮತ್ತು ಪಕ್ಷದ ಹಿರಿಯರು, ಮರೇ ವಾಡ ಗ್ರಾಮದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..