ಧಾರವಾಡ –
ತೆಗ್ಗು ತಗೆದ್ರು ನೋಡೊದಿಲ್ಲ ಜನರು ಪರದಾಡುತ್ತಿದ್ರು ನೋಡುತ್ತಿಲ್ಲ ಪಾಲಿಕೆ ಮುಖ್ಯರಸ್ತೆಯಲ್ಲಿಯೇ ದೊಡ್ಡ ದೊಡ್ಡ ತೆಗ್ಗು ತಗೆದ್ರು ಮೌನವಾಗಿದ್ದಾರೆ ಪಾಲಿಕೆಯವರು…. ಏನು ಮಾಡಿದ್ರು ನಡೆಯುತ್ತದೆ…..ನೋಡಿ ಆಯುಕ್ತರೇ…..
ಸಾಮಾನ್ಯವಾಗಿ ಯಾರೇ ಆಗಲಿ ರಸ್ತೆಯಲ್ಲಿ ತೆಗ್ಗು ತಗೆಯಬೇಕಾದರೆ ಪಾಲಿಕೆಯವರಿಗೆ ಹಣವನ್ನು ಕಟ್ಟಬೇಕು.ಹಣ ಕಟ್ಟಿದ ಮೇಲೆ ತೆಗ್ಗು ತಗೆದ ಜಾಗೆ ಯನ್ನು ಪುನಃ ಸರಿ ಮಾಡಬೇಕು ಸಾರ್ವಜನಿ ಕರಿಗೆ ತೊಂದರೆಯಾಗದಂತೆ ಸರಿ ಮಾಡಬೇಕು ಎಂಬ ನಿಯಮಗಳು ಇವೆ.ಹೀಗಿರುವಾಗ ಧಾರವಾಡದ ಎಲ್ಇಎ ಕ್ಯಾಂಟಿನ್ ಮುಂದಿನ ಮುಖ್ಯ ರಸ್ತೆಯಲ್ಲಿ ತೆಗ್ಗನ್ನು ತಗೆದು ಕೆಲಸ ಮಾಡಿಕೊಂಡಿದ್ದಾರೆ.
ಸಧ್ಯ ತಗೆದ ತೆಗ್ಗು ದೊಡ್ಡ ಪ್ರಮಾಣದಲ್ಲಿ ಹಾಗೆ ಇದೆ ಹೀಗಾಗಿ ವಾಹನ ಸವಾರರು ಪರದಾಡುತ್ತಿ ದ್ದಾರೆ.ಜೋರಾಗಿ ಬರುತ್ತಿದ್ದಂತೆ ದೊಡ್ಡ ತೆಗ್ಗನ್ನು ನೋಡಿ ತೆಗ್ಗಿಗೆ ಬೀಳುತ್ತವೆ ಎಂಬ ಭಯದಿಂದ ಬ್ರೇಕ್ ಹಾಕುತ್ತಾರೆ ಹೀಗೆ ಬ್ರೇಕ್ ಹಾಕುತ್ತಿದ್ದಂತೆ ಹಿಂದಿನಿಂದ ಬಂದ ವಾಹನಗಳು ಡಿಕ್ಕಿಯಾಗು ತ್ತವೆ ಹೀಗಾಗಿ ಬೈಕ್ ಸವಾರರು ಒಂದು ಕಡೆ ಬೀಳುತ್ತಿದ್ದರೆ ಮತ್ತೊಂದೆಡೆ ವಾಹನಗಳು ಕೂಡಾ ಅಪಘಾತಗಳಾಗುತ್ತಿದ್ದು
ಪಕ್ಕದಲ್ಲಿಯೇ ಧಾರವಾಡದ ಪಾಲಿಕೆಯ ಮುಖ್ಯ ಕಚೇರಿ ಇದೆ ಇದು ಕಂಡು ಕಾಣದಂತೆ ಪಾಲಿಕೆಯ ಅಧಿಕಾರಿಗಳಿದ್ದಾರೆ.ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಹೀಗೆ ತೆಗ್ಗು ಬಿದ್ದಿದ್ದರೂ ಕೂಡಾ ಪಾಲಿಕೆಯ ಅಧಿಕಾರಿಗಳು ಮೌನವಾಗಿದ್ದಾರೆ.
ಯಾರೋ ಯಾವುದೇ ಕೆಲಸಕ್ಕೆ ಮುಖ್ಯ ರಸ್ತೆ ಯನ್ನು ಅಗೆದು ಕೆಲಸವನ್ನು ಮಾಡಿಕೊಂಡು ಸಧ್ಯ ಹಾಗೇ ಬಿಟ್ಟಿದ್ದು ಹೀಗಾಗಿ ಸಾರ್ವಜನಿಕರು ಪರದಾಡುತ್ತಿದ್ದು ಈ ಒಂದು ಸಮಸ್ಯೆ ಮುಖ್ಯ ವಾಗಿ ಪಾಲಿಕೆಯ ಅಧಿಕಾರಿಗಳಿಗೆ ಕಾಣುತ್ತಿಲ್ಲ ಕಂಡರು ಕಾಣದಂತೆ ಇದ್ದಾರೆ
ಇತ್ತ ಚುನಾವಣೆಯ ಬ್ಯೂಜಿಯಲ್ಲಿರುವ ಪಾಲಿಕೆಯ ಆಯುಕ್ತರು ಇನ್ನಾದರೂ ಇತ್ತ ಒಮ್ಮೆ ನೋಡಿ ಸಮಸ್ಯೆ ಪರಿಹಾರ ಮಾಡಿ ಸಾರ್ವಜನಿ ಕರಿಗೆ ಸಮಸ್ಯೆಯಿಂದ ಮುಕ್ತಿ ನೀಡಬೇಕಿದೆ ಇದನ್ನು ಡಾ ಈಶ್ವರ ಉಳ್ಳಾಗಡ್ಡಿಯವರು ಮಾಡತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..