ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮುಂದೂಡಲಾಗಿದ್ದ FDA ಪರೀಕ್ಷೆಗೆ ಡೇಟ್ ಫಿಕ್ಸ್….

Suddi Sante Desk

ಬೆಂಗಳೂರು –

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲ್ಪಟ್ಟಿದ್ದ FDA ಪರೀಕ್ಷೆಗೆ ದಿನಾಂಕ ಘೋಷಣೆಯಾಗಿದೆ‌.2020ರ ಜನವರಿ 31ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, 2021ರ ಜನವರಿ 24ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು ಆದರೆ ಪರೀಕ್ಷೆ ‌ಯ ಮುಂಚೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು‌ ಇದರಿಂದಾಗಿ ಪರೀಕ್ಷೆ ಮುಂದೂಡಲಾಗಿತ್ತು.

ಪರೀಕ್ಷೆಗೂ ಮುನ್ನಾ ದಿನವೇ ಅಂದರೆ ಜ.23 ರಂದು ಎರಡು ಅಧಿವೇಶನಗಳಲ್ಲಿ ನಡೆಯಬೇಕಿದ್ದ ಸ್ಪರ್ಧಾ ತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಅವರು ಪರೀಕ್ಷೆ ಮುಂದೂಡಿದ್ದರು. ಇದೀಗ FDA ಪರೀಕ್ಷೆಗೆ ದಿನಾಂಕವನ್ನು ಮರುನಿಗದಿ ಮಾಡಲಾಗಿದ್ದು, ಇದೇ 28ರಂದು ಅಂದರೆ(ಫೆ.28ರಂದು) ಪರೀಕ್ಷೆ ನಡೆಯಲಿದೆ.ಇದರಿಂದ ಅಭ್ಯರ್ಥಿಗಳು ಸಂತಸಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.