ಹುಬ್ಬಳ್ಳಿ –
ರಾತ್ರೋ ರಾತ್ರಿ ಕೆಲಸ ಮಾಡಿ ಹಣದೊಂದಿಗೆ ಖಾತೆ ಬದಲಾವಣೆ ದಾಖಲೆ ನೀಡಿದ ಇಸ್ಮಾಯಿಲ್ – ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಪಾಲಿಕೆಯ ಆಯುಕ್ತರ ಎಚ್ಚರಿಕೆಯ ಸಂದೇಶಕ್ಕೆ ಕೆಲಸ ಮಾಡಿ ಹೆಚ್ಚುವರಿ ಹಣವನ್ನು ಮರಳಿ ನೀಡಿದ ಶಿವಳ್ಳಿ
ಸುದ್ದಿ ಸಂತೆಯ ಒಂದು ಸಣ್ಣ ವರದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಸ್ಪಂದಿಸಿದ್ದಾರೆ.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 9 ರಲ್ಲಿ ಕರ್ತವ್ಯವನ್ನು ಮಾಡುತ್ತಿರುವ ಇಸ್ಮಾಯಿಲ್ ಶಿವಳ್ಳಿಯವರು ಈ ಹಿಂದೆ ಇದ್ದ ವಲಯ ಕಚೇರಿ 6 ರಲ್ಲಿದ್ದಾಗ ಪ್ರಕಾಶ ಕಾಟವೆ ಎಂಬುವರು ತಮ್ಮ ಮನೆಯ ಖಾತೆ ಬದಲಾವಣೆಯನ್ನು ಮಾಡಿಸಲು ಬೇರೆಯವರ ಮೂಲಕ ಇವರನ್ನು ಸಂಪರ್ಕ ಮಾಡಿದ್ದಾರೆ.
ಈ ಕುರಿತಂತೆ ಎಲ್ಲಾ ದಾಖಲೆಗಳನ್ನು ಕೂಡಾ ನೀಡಿದ್ದಾರೆ.ಪಾಲಿಕೆಗೆ ತುಂಬಬೇಕಾದ ಹಣವನ್ನು ಕೂಡಾ ಮುಂಚಿತವಾಗಿ ನೀಡಿದ್ದರು.ಅಲ್ಲದೇ ಈ ಒಂದು ಕೆಲಸವನ್ನು ಮಾಡಲು 15 ಸಾವಿರ ರೂಪಾಯಿ ಕೂಡಾ ಕೇಳಿದ್ದು ತುಂಬಾ ಹೆಚ್ಚಿಗೆ ಆಗುತ್ತದೆ ಎಂದಾಗ ಅಂತಿಮವಾಗಿ 10 ಸಾವಿರ ರೂಪಾಯಿ ಹಣವನ್ನು ನೀಡಿದ್ದರು
ದಾಖಲೆಗಳೊಂದಿಗೆ ಹಣವನ್ನು ನೀಡಿ ಬರೊಬ್ಬರಿ 1 ವರ್ಷಗಳು ಕಳೆದರು ಕೂಡಾ ಈವರೆಗೆ ಇನ್ನೂ ಕೆಲಸವಾಗಿಲ್ಲ ಖಾತೆ ಬದಲಾವಣೆಯಾಗಿರಲಿಲ್ಲ ನೂರೆಂಟು ಕಾರಣಗಳನ್ನು ಹೇಳುತ್ತಾ ಸಮಯ ವನ್ನು ಕಳೆಯುತ್ತಿರುವ ಇಸ್ಮಾಯಿಲ್ ಶಿವಳ್ಳಿ ಯವರು ಕೆಲಸವನ್ನು ಮಾಡಿಕೊಡದಿರುವುದು ಇರಲಿ ದಾಖಲೆಗಳನ್ನು ಕೊಡಿ ಎಂದು ಕೇಳಬೇಕು ಎಂದರೆ ಸಧ್ಯ ಪ್ರಕಾಶ ಕಾಟವೆಯವರ ಪೊನ್ ನ್ನು ಕೂಡಾ ಸ್ವೀಕಾರ ಮಾಡುತ್ತಿರಲಿಲ್ಲ
ಅತ್ತ ಹಣವು ಹೋಯಿತು ದಾಖಲೆಗಳು ಹೋದವು ಎನ್ನುತ್ತಾ ಪರದಾಡುತ್ತಿದ್ದ ಪ್ರಕಾಶ ಕಾಟವೆಯವರ ಈ ಒಂದು ಸಮಸ್ಯೆ ಕುರಿತಂತೆ ಸುದ್ದಿ ಸಂತೆ ವರದಿಯೊಂದನ್ನು ಪ್ರಸಾರ ಮಾಡಿತು ವರದಿ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿಯವರು ಸ್ಪಂದಿಸಿದ್ದಾರೆ.
ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದುಕೊಂಡು ಈ ಕುರಿತಂತೆ ವಲಯ ಅಧಿಕಾರಿ ಕಟಗಿ ಯವರಿಗೆ ವರದಿ ನೀಡುವಂತೆ ಸೂಚನೆ ನೀಡಿದ ಬೆನ್ನಲ್ಲೇ ಇತ್ತ ಎದ್ದೊ ಬಿದ್ದೊ ಎಂಬಂತೆ ಇಸ್ಮಾಯಿಲ್ ಶಿವಳ್ಳಿ ತರಾತುರಿಯಲ್ಲಿ ಒಂದು ವರ್ಷ ಮಾಡದ ಕೆಲಸವನ್ನು ಒಂದು ಗಂಟೆಯಲ್ಲಿ ಮಾಡಿ ಮುಂಗಡವಾಗಿ ತಗೆದುಕೊಂಡು ಬಂದಿದ್ದ 10 ಸಾವಿರ ಹಣದಲ್ಲಿ ನಾಲ್ಕು ಸಾವಿರ ಹಣವನ್ನು ತುಂಬಿ ಉಳಿದ 6 ಸಾವಿರ ಹಣವನ್ನು ಪ್ರಕಾಶ ಕಾಟವೆಯವರಿಗೆ ನೀಡಿದ್ದಾರೆ.
ಖಾತೆ ಬದಲಾವಣೆಯನ್ನು ಮಾಡಿ ದಾಖಲೆಗ ಳೊಂದಿಗೆ ಉಳಿದ ಹಣವನ್ನು ಪ್ರಕಾಶ ಕಾಟವೆ ಯವರಿಗೆ ನೀಡಿ ಹೋಗಿದ್ದಾರೆ.ಇನ್ನೂ ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ವರದಿ ಬೆನ್ನಲ್ಲೇ ಇತ್ತ ಯುವ ಮುಖಂಡ ರಾಜು ನಾಯಕವಾಡಿ ಕೂಡಾ ಪಾಲಿಕೆಯ ಆಯುಕ್ತರಿಗೆ ದೂರವಾಣಿ ಯಲ್ಲಿ ಮಾತನಾಡಿದ್ದರು
ಅಧಿಕಾರ ಇರದಿದ್ದರೂ ಕೂಡಾ ಸಾರ್ವಜನಿಕರ ಸಮಸ್ಯೆಗೆ ಸದಾ ಯಾವಾಗಲೂ ಸ್ಪಂದಿಸುತ್ತಿರುವ ರಾಜು ಅನಂತಸಾ ನಾಯಕವಾಡಿ ಯವರ ದೂರವಾಣಿಗೆ ಕರೆಗೆ ಸ್ಪಂದಿಸಿದ ಆಯುಕ್ತರು ಸಮಸ್ಯೆಯನ್ನು ಪರಿಹಾರ ಮಾಡಿಕೊಟ್ಟಿದ್ದಾರೆ ಪೊನ್ ನಲ್ಲಿಯೇ ಸಮಸ್ಯೆ ಕುರಿತಂತೆ ಸ್ಪಂದಿಸಿದ ಆಯುಕ್ತರಿಗೆ ರಾಜು ನಾಯಕವಾಡಿಯವರು ಧನ್ಯವಾದಗಳನ್ನು ಹೇಳಿದ್ದಾರೆ.
ಇನ್ನೂ ಅಧಿಕಾರ ಇರಲಿ ಇಲ್ಲದಿರಲಿ ಸದಾ ಯಾವಾಗಲೂ ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗುತ್ತಿರುವ ರಾಜು ನಾಯಕವಾಡಿಯರ ಸ್ಪಂದಿಸುವ ಗುಣ ಮೆಚ್ಚುಂತಹದ್ದು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..