ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ನ್ಯಾಯವಾದಿ ಮೇಲೆ FIR ದಾಖಲು……

Suddi Sante Desk

ಬೆಂಗಳೂರು –

ಭಗವಾನ್ ಅವರ ಹೇಳಿಕೆ ವಿರೋಧಿಸಿ ಅವರ ಮುಖಕ್ಕೆ‌ ಮಸಿ ಬಳಿದಿದ್ದ ನ್ಯಾಯವಾದಿ ಮೀರಾ ರಾಘವೇಂದ್ರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಭಗವಾನ್ ಅವರು ಹಿಂದೂ ಧರ್ಮ ಧರ್ಮವೇ ಅಲ್ಲ, ಹಿಂದೂ ಶಬ್ಧ ಅವಮಾನಕರ ಎಂದು ಹೇಳಿದ್ದರು. ಈ ಬಗ್ಗೆ ವಕೀಲೆ ಮೀರಾ ರಾಘವೇಂದ್ರ ಅವರು ದೂರು ದಾಖಲಿಸಿದ್ದರು. ಆ ದೂರಿನನ್ವಯ ಭಗವಾನ್ ವಿಚಾರಣೆಗೆ ಹಾಜರಾಗಿದ್ದರು. ಕೋರ್ಟ್ ಅವರಿಗೆ ಜಾಮೀನು ಸಹ ನೀಡಿತ್ತು.

ಹೊರಗೆ ಬರುವಾಗ ವಕೀಲೆ ಮೀರಾ ಹಾಗೂ ಭಗವಾನ್ ಎದುರು ಬದುರಾಗಿದ್ದರು. ಈ ವೇಳೆ ಮೀರಾ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿದಿದ್ದರು. ಈ ಘಟನೆ ಸಂಬಂಧ ಭಗವಾನ್ ಅವರು ಮೀರಾ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಮೀರಾ ವಿರುದ್ಧ FIR ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.