ಐತಿಹಾಸಿಕ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆ ರದ್ದು – ಜಿಲ್ಲಾಡಳಿತ ಆದೇಶ – ಈ ಬಾರಿ ಗೊರವಯ್ಯ ನುಡಿಯಲ್ಲ ಭವಿಷ್ಯ…

Suddi Sante Desk

ಬಳ್ಳಾರಿ –

ಮಹಾಮಾರಿ ಕೊರೊನಾ ಹಿನ್ನಲೆಯಲ್ಲಿ ಐತಿಹಾಸಿಕ ಶ್ರೀ ಮೈಲಾರ ಜಾತ್ರೆಯನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹೌದು. ಫೆ 19 ರಿಂದ ಮಾ 2 ರವರೆಗೆ ನಡೆಯಬೇಕಿದ್ದ ಜಾತ್ರೋತ್ಸವನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಡಗಲಿ ತಾಲೂಕಿನ ಧಾರ್ಮಿಕ ಕ್ಷೇತ್ರ ಮೈಲಾರ ಗ್ರಾಮದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆ ರಾಜ್ಯದಲ್ಲಿ ಬಹಳ ಪ್ರಸಿದ್ದಿ ಪಡೆದಿದೆ.

ಈ ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ಹಲವು ಭಾಗದಿಂದ ಭಕ್ತರು ಬರುತ್ತಾರೆ. ವಿಶೇಷ ಅಂದರೆ ಸುಮಾರು 15 ಅಡಿ ಮರದ ಬಿಲ್ಲನ್ನು ಏರಿ ಕಾರ್ಣಿಕ ನುಡಿಯುವ ಗೊರವಯ್ಯ ನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಭವಿಷ್ಯವನ್ನು ಆಲಿಸುತ್ತಿದ್ದರು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 1 ರಂದು ಕಾರ್ಣಿಕೋತ್ಸವ ನಡೆಯಬೇಕಿತ್ತು.ಆದರೆ ಕೊರೊನಾ ಸೋಂಕಿನ ಹಿನ್ನೆಲೆ ಫೆ.19 ರಿಂದ ಮಾ 2 ರವರೆಗೂ ನಡೆಯಬೇಕಿದ್ದ ಜಾತ್ರೋತ್ಸವನ್ನು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಿ ಪಾಟೀಲ್ ರದ್ದು ಮಾಡಿ ಜಿಲ್ಲಾಡಳಿತದ ಆದೇಶ ಹೊರಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.