ಹುಬ್ಬಳ್ಳಿ –
ಆರು ತಿಂಗಳು ಕಳೆದರು ಇನ್ನು ಹೊರಬಾರದ 3502 – ಡಿಪೋ ದಲ್ಲಿ ನಿಂತಲ್ಲೇ ನಿಂತುಕೊಳ್ಳು ತ್ತಿವೆ ಬಸ್ ಗಳು…..ಇದೇನಿದು DC ಸಾಹೇಬ್ರೆ ಇದೇಲ್ಲಾ ನಿಮ್ಮ ಗಮನಕ್ಕೆ ಇಲ್ವಾ…..
ಒಂದಲ್ಲ ಒಂದು ಸಮಸ್ಯೆಯಿಂದಾಗಿ ಚಿಗರಿ ಬಸ್ ಗಳು ಬಿಡಿಯಾಗಿ ಡಿಪೋ ಸೇರಿಕೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಬಸ್ ಗಳ ಸಂಖ್ಯೆ ಹೆಚ್ಚಾಗು ತ್ತಿದ್ದು ಈ ನಡುವೆ ಆರಂಭಗೊಂಡು ಈವರೆಗೆ ಅದೇ ಬಸ್ ಗಳು ಬಿಡುವಿಲ್ಲದೇ ಒಡಾಡುತ್ತಿದ್ದು ಇನ್ನೂ ಇವುಗಳ ನಿರ್ವಹಣೆ ವ್ಯವಸ್ಥೆ ಮಾತ್ರ ಸರಿಯಾಗಿ ಆಗುತ್ತಿಲ್ಲ ಎಂಬೊದಕ್ಕೆ ಹುಬ್ಬಳ್ಳಿ ಧಾರವಾಡ ಡಿಪೋ ದಲ್ಲಿ ನಿಂತುಕೊಂಡಿರುವ ಬಸ್ ಗಳೇ ಸಾಕ್ಷಿಯಾಗಿದ್ದು
ಇದಕ್ಕೆ 3502 ಕೂಡಾ ಹೊರತಾಗಿಲ್ಲ.ಹೌದು ಆರು ತಿಂಗಳ ಹಿಂದೆ ಗೇರ್ ಶಿಪ್ಟಿಂಗ್ ವಿಚಾರದಲ್ಲಿ ಬಿಡಿಯಾಗಿರುವ ಈ ಒಂದು ಬಸ್ ಇನ್ನೂ ಕೂಡಾ ದುರಸ್ತಿಯಾಗುತ್ತಿಲ್ಲ ಒಂದು ಕಡೆಗೆ ಬಸ್ ಗಳು ಡಿಪೋ ದಲ್ಲಿ ನಿಂತುಕೊಂಡಿರುವ ಸಂಖ್ಯೆ ಹೆಚ್ಚಾ ಗುತ್ತಿದ್ದರೆ ಇನ್ನೊಂದೆಡೆ ಸರಿಯಾಗಿ ಬಸ್ ಗಳಿಗೆ ಅವಶ್ಯಕವಾಗಿ ಬೇಕಾಗಿರುವ ಮಟಿರಿಯಲ್ಸ್ ಗಳು ಸಿಗುತ್ತಿಲ್ಲ ಎಂಬ ಮಾತುಗಳು ಎರಡು ಡಿಪೋ ದಲ್ಲಿ ನಿಂತುಕೊಂಡಿರುವ ಬಸ್ ಗಳೇ ಸಾಕ್ಷಿಯಾಗಿದ್ದು
ಈಗಷ್ಟೇ ಇಲಾಖೆಗೆ ಡಿಸಿಯಾಗಿ ದೂರದ ಬೆಂಗಳೂರಿನಿಂದ ಬಂದಿರುವ ಸಿದ್ದಲಿಂಗಯ್ಯ ಅವರೇ ಹಲವಾರು ಬಾರಿ ಡಿಪೋ ಗಳಿಗೆ ಭೇಟಿ ನೀಡಿ ಎಲ್ಲವನ್ನು ಪರಿಶೀಲನೆ ಮಾಡುವ ನಿಮಗೆ ಹುಬ್ಬಳ್ಳಿ ಧಾರವಾಡದಲ್ಲಿ ನಿಂತುಕೊಂಡಿರುವ ಬಸ್ ಗಳು ಕಾಣುತ್ತಿಲ್ಲವೇ ಯಾಕೆ ಯಾತಕ್ಕಾಗಿ ಎಷ್ಟು ಬಸ್ ಗಳು ನಿಂತುಕೊಂಡಿವೆ ಎಂಬೊದಕ್ಕೆ ನಿಮ್ಮ ಕಾರ್ಯವೈಖರಿಯೇ ಸಾಕ್ಷಿಯಾಗಿದ್ದು
ಡ್ರೈವರ್ ಗಳಿಂದ ಏನಾದರು ಸಣ್ಣ ಪುಟ್ಟ ತಪ್ಪಗಳಾದರೆ ಕೂಡಲೇ ಅವರ ಮೇಲೆ ಕ್ರಮ ವನ್ನು ಕೈಗೊಳ್ಳುವ ನಿಮಗೆ ಸಣ್ಣ ಸಣ್ಣ ಕಾರಣ ಕ್ಕಾಗಿ ಡಿಪೋ ದಲ್ಲಿ ನಿಂತುಕೊಂಡಿರುವ ಚಿಗರಿ ಬಸ್ ಗಳು ಆರೇಳು ತಿಂಗಳು ಕಳೆದರು ಕೂಡಾ ದುರಸ್ತಿ ಯಾಕೆ ಆಗುತ್ತಿಲ್ಲ ಕಾರಣ ಏನು ಒಮ್ಮೆ ನೋಡಿ.ಅದರಲ್ಲೂ 3502 ಬಸ್ ಗೆ ಮಟೀಯರ ಲ್ಸ್ ಗಳು ಸಿಗುತ್ತಿಲ್ಲವೇ
ಅಥವಾ ತರಿಸಲು ಆಸಕ್ತಿ ಇಲ್ವಾ ಹಣದ ಕೊರತೆ ಯಾಗಿದೆಯಾ ಎಂಬ ಅನುಮಾನ ಕಾಡುತ್ತಿದ್ದು ಇದಕ್ಕೇಲ್ಲ ಡಿಸಿಯವರು ಉತ್ತರಿಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..