ಹುಬ್ಬಳ್ಳಿ –
ಕೋಟಿ ಕೋಟಿ ದುಬಾರಿ ಚಿಗರಿ ಬಸ್ ಗೆ ದುಬಾರಿಯಾದ ಕಾರ್ಡ್ ಗಳು – ಎರಡೇ ಎರಡು ಬಸ್ ಗಳಲ್ಲಿ ಕೇಳಿ ಬರುತ್ತಿದೆ ಅನೌನ್ಸಮೆಂಟ್ ಶಬ್ದ…..ಬಸ್ ನಲ್ಲಿ ನೀವು ಪ್ರಯಾಣಿಸುವಾಗ ಇದು ನಿಮಗೆ ಕೇಳಿಸಿದೆಯಾ ಡಿಸಿ ಸಾಹೇಬ್ರೆ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿ ರುವ ಚಿಗರಿ ಬಸ್ ಬೆಲೆ ಕೇಳಿದರೆ ಶಾಕ್ ಆಗುತ್ತದೆ ಒಂದು ಕೋಟಿ ರೂಪಾಯಿ ದುಬಾರಿ ಬೆಲೆಯ ಈ ಒಂದು ಬಸ್ ಗಳು ಸಂಪೂರ್ಣವಾಗಿ ಸೆನ್ಸಾರ್ ಗಳಿಂದ ಹೈಟೇಕ್ ಆಗಿದ್ದು ದುರುಂತವೆಂದರೆ ಸರಿಯಾದ ನಿರ್ವಹಣೆ ಮತ್ತು ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಸಧ್ಯ ಸಂಪೂರ್ಣವಾಗಿ ಹಾಳಾಗಿವೆ.
ಇನ್ನೂ ಹವಾನಿಯಂತ್ರಿತ ಈ ಒಂದು ಬಸ್ ನಲ್ಲಿ ಆರಂಭದಲ್ಲಿ ಪ್ರಯಾಣಿಕರಿಗೆ ನಿಲ್ದಾಣಗಳ ಪರಿಚಯ ಪ್ರಸ್ತುತ ನಿಲ್ದಾಣ ಯಾವುದು ಮುಂದಿನ ನಿಲ್ದಾಣ ಯಾವುದು ಹೀಗೆ ಅನೌನ್ಸಮೆಂಟ್ ಶಬ್ದ ಬರುತ್ತಿತ್ತು ಆದರೆ ಐಟಿ ಬಂದ್ ಆದ ಮೇಲೆ ಸಧ್ಯ ಇದು ಕೂಡಾ ನಿಂತು ಕೊಂಡಿದೆ.ಹೀಗಾಗಿ ಈಗಂತೂ ಒಂದು ಎರಡು ಬಸ್ ಗಳಲ್ಲಿ ಈ ಒಂದು ಶಬ್ದವು ಕೇಳಿ ಬರುತ್ತಿದೆ.
ಕೋಟಿ ಕೋಟಿ ದುಬಾರಿ ಬಸ್ ನಲ್ಲಿ ಈ ಒಂದು ವ್ಯವಸ್ಥೆ ಹಾಳಾಗಲು ಒಂದು ಕಾರ್ಡ್ ಗಳ ಕೊರತೆ ಮತ್ತೊಂದೆಡೆ ಐಟಿ ವ್ಯವಸ್ಥೆ ಕೂಡಾ ಸಂಪೂರ್ಣ ವಾಗಿ ಬಂದ್ ಆಗಿದ್ದು ಇದರಿಂದಾಗಿ ಅನೌನ್ಸ ಮೆಂಟ್ ನಿಂತುಕೊಂಡಿದ್ದು ಪ್ರಯಾಣಿಕರಿಗೆ ದೊಡ್ಡ ತಲೆನೋವಿನ ಕೆಲಸವಾಗಿದೆ ಅದರಲ್ಲೂ ಹೊಸದಾಗಿ ಪ್ರಯಾಣ ಮಾಡುವವರಿಗೆ ಎಲ್ಲವೂ ಗೊಂದಲ ಗೊಂದಲವಾಗುತ್ತಿದ್ದು
ನಿಲ್ದಾಣಗಳ ಮಾಹಿತಿ ಇಲ್ಲದೇ ಪರದಾಡುತ್ತಿದ್ದಾರೆ ಇನ್ನೂ ಕೆಲವರಂತೂ ಡ್ರೈವರ್ ಗಳೊಂದಿಗೆ ಜಗಳ ಮಾಡುತ್ತಿರುವ ದೃಶ್ಯಗಳು ಕೂಡಾ ಕಂಡು ಬರುತ್ತಿದ್ದು ದುಬಾರಿ ಬಸ್ ನಲ್ಲಿ ಸಾವಿರಾರು ರೂಪಾಯಿಗಳ ಕಾರ್ಡ್ ಗಳನ್ನು ಖರೀದಿ ಮಾಡಿ ಹಾಕುವಷ್ಟು ಹಣ ಇಲ್ಲದಂತಹ ಪರಸ್ಥಿತಿ ಚಿಗರಿ ಸಾರಿಗೆ ಯಲ್ಲಿ ಕಂಡು ಬರುತ್ತಿದ್ದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಡ್ರೈವರ್ ಗಳ ಕಾರ್ಯ. ವೈಖರಿಯನ್ನು ಪರೀಕ್ಷೆ ಮಾಡುವ ಡಿಸಿ ಸಾಹೇಬ್ರೆ ಬಸ್ ನಲ್ಲಿ ಪ್ರಯಾಣ ಮಾಡುವಾಗ ಈ ಒಂದು ಸಮಸ್ಯೆ ನಿಮ್ಮ ಗಮನಕ್ಕೆ ಬಂದಿಲ್ವಾ
ಪದೇ ಪದೇ ಡ್ರೈವರ್ ಗಳ ಸಮಸ್ಯೆಯನ್ನು ಹುಡುಕುತ್ತಿರುವ ತಾವುಗಳು ಇನ್ನಾದರು ಬಸ್ ನಲ್ಲಿ ಪ್ರಮುಖವಾಗಿ ಅವಶ್ಯಕವಾಗಿರುವ ಈ ಒಂದು ಸೌಲಭ್ಯವನ್ನು ಆರಂಭ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಡ್ರೈವರ್ ಗಳಿಗೆ ಕಿರಿಕಿರಿ ತಪ್ಪಿಸಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ …..