ಹುಬ್ಬಳ್ಳಿ –
ರಾಜ್ಯಪಾಲರ ವಿರುದ್ದ ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಪ್ರತಿಭಟನೆ – ಶಾಸಕರಾದ ಪ್ರಸಾದ ಅಬ್ಬಯ್ಯ,ಎನ್ ಎಚ್ ಕೋನರೆಡ್ಡಿ ಯವರ ನೇತ್ರತ್ವದಲ್ಲಿ ನಡೆಯಿತು ಪ್ರತಿಭಟನೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಾನೂನ ಕ್ರಮಕ್ಕೆ ರಾಜ್ಯಪಾಲರು ನೀಡಿದ ಪರವಾನಗಿಗೆ ರಾಜ್ಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.ರಾಜ್ಯದ ಹಲವೆಡೆ ಈ ಒಂದು ವಿಚಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು ಇನ್ನೂ ಇತ್ತ ಇದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಯನ್ನು ಮಾಡಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೇಸ್ ಪಕ್ಷದವರು ಪ್ರತಿಭಟನೆ ನಡೆಸಿದರು.ಕುತಂತ್ರ ಬಿಜೆಪಿಯ ಸರ್ಕಾರ ಬೀಳಿಸುವ ಯಾವುದೇ ಕುಚೇಷ್ಟೆಗೆ ನಾವು ಮನಿಯುವ ಮಾತೇ ಇಲ್ಲ. ಮುಖ್ಯಮಂತ್ರಿಗಳ ಮೇಲೆ ಬಂದಿರು ಆರೋಪ ಗಳು ಸತ್ಯಕ್ಕೆ ದೂರವಾಗಿದ್ದು ಕಾನೂನು ಹೋರಾಟ ನಡೆಸುವ ಮೂಲಕ ಬಿಜೆಪಿಗೆ ತಕ್ಕ ಪಾಠಕಲಿಸುತ್ತೇವೆ ಎನ್ನುತ್ತಾ ರಾಜ್ಯಪಾಲರ ವಿರುದ್ದ ಹೋರಾಟವನ್ನು ಮಾಡಿದರು.
ಇದರೊಂದಿಗೆ ರಾಜ್ಯಪಾಲರ ನಡೆಯನ್ನು ಖಂಡಿಸಿ ಇದೇ 19ರಂದು ರಾಜ್ಯಾದ್ಯಂತ ಬೃಹತ್ ಜನಾಂದೋಲನ ಮಾಡಲಾಗುವುದು ಎಂದು ಕೈ ಪಕ್ಷದ ಮುಖಂಡರು ನಾಯಯರು ಹೇಳಿದರು. ಈ ಒಂದು ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ ನಾಯಕ, ಮಾಜಿ ಸಂಸದರಾದ ಐ.ಜಿ.ಸನದಿ, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಡಿಸಿಸಿ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲಕುಮಾರ್ ಪಾಟೀಲ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..