ಹುಬ್ಬಳ್ಳಿ –
BRTS ಅಧಿಕಾರಿಗಳ ಎಡವಟ್ಟು ಮಾರ್ಷಲ್ ಗಳ ಕೈಯಲ್ಲಿ ಮಷಿನ್ ಗಳು – ಯಾರ ಯಾರ ಕೆಲಸ ಏನು ಮಾಡತಾ ಇದ್ದಾರೆ ಎಂಬೊದನ್ನು ಮೊದಲು ನೋಡಿ DCಯವರೇ …..ವೈರಲ್ ಆಗಿವೆ ಪೊಟೊಗಳು
ಹುಬ್ಬಳ್ಳಿ ಧಾರವಾಡ ಮಧ್ಯೆ ಆರಂಭಗೊಂಡಿರುವ ಚಿಗರಿ ಸಾರಿಗೆ ಯಲ್ಲಿ ಭದ್ರತೆ ಗಾಗಿ ಮೊದಲ ಬಾರಿಗೆ ಮಾರ್ಷಲ್ ಗಳನ್ನು ನೇಮಕ ಮಾಡಿಕೊ ಳ್ಳಲಾಗಿದೆ.ಮೊದಲೇ ಕಡಿಮೆ ಇಂಧನ ಮೈಲೇಜ್ ನೀಡುವ ಬಸ್ ಗಳಿಂದಾಗಿ ಸಂಸ್ಥೆ ಈಗಾಗಲೇ ನಷ್ಟದಲ್ಲಿದ್ದು ಇದರೊಂದಿಗೆ ಸಾಕಷ್ಟು ಪ್ರಮಾಣ ದಲ್ಲಿ ಸಂಸ್ಥೆ ಹೆಚ್ಚಿನ ಹೊರೆಯನ್ನು ಅನಾವಶ್ಯಕ ಖರ್ಚನ್ನು ಹಾಕಿಕೊಳ್ಳುತ್ತಿದ್ದು ಇದಕ್ಕೆ ಸಾಕ್ಷಿ ಮಾರ್ಷಲ್ ಗಳು.
ಯಾವ ಕಾರಣಕ್ಕಾಗಿ ಯಾತಕ್ಕಾಗಿ ಮಾರ್ಷಲ್ ಗಳನ್ನು ತಗೆದುಕೊಳ್ಳಲಾಗಿದೆ ಎಂಬೊದು ಈವರೆಗೆ ಯಕ್ಷ ಪ್ರಶ್ನೆಯಾಗಿದ್ದು ಇದರ ನಡುವೆ ಇವರು ಮಾಡಬೇಕಾದ ಕೆಲಸವನ್ನು ಬಿಟ್ಟು ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ. ಹೌದು ಇವರನ್ನು ತಗೆದುಕೊಂಡಿರುವ ಮೂಲ ಉದ್ದೇಶವನ್ನು ಅಧಿಕಾರಿಗಳು ಮರೆತಂತೆ ಕಾಣುತ್ತಿದ್ದು ಮಾರ್ಷಲ್ ಗಳ ಕೈಯಲ್ಲಿ ಮಷೀನ್ ಗಳನ್ನು ನೀಡಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಆರಾಮವಾಗಿದ್ದಾರೆ
ಸಾರ್ವಜನಿಕರು ಈ ಒಂದು ಪೊಟೊ ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿ ಪ್ರಶ್ನೆ ಮಾಡಿದ್ದಾರೆ.ಇನ್ನೂ ಚಾಲಕರ ಕಾರ್ಯ ವೈಖರಿಯನ್ನು ಪರೀಕ್ಷೆ ಮಾಡುವ ಡಿಸಿಯವರು ಇಲಾಖೆಯಲ್ಲಿ ಏನು ನಡೆಯುತ್ತಿದೆ ಯಾರು ಯಾರು ಯಾವ ಕೆಲಸಗಳನ್ನು ಮಾಡ್ತಾ ಇದ್ದಾರೆ ಎಂಬೊದನ್ನು ಒಮ್ಮೆ ನೋಡಬಾರದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..