ಧಾರವಾಡ –
ಆಗಸ್ಟ್.22ರಂದು ಧಾರವಾಡ ದಲ್ಲಿ ನೀರು ಪೂರೈಕೆ ಯಲ್ಲಿ ವ್ಯತ್ಯಯವಾಗಲಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ತಿಳಿಸಿದ್ದಾರೆ.ಅಮ್ಮಿನಭಾವಿ ನೀರು ಶುದ್ಧೀಕರಣ ಘಟಕದಿಂದ ಧಾರವಾಡ ನಗರಕ್ಕೆ ನೀರು ಸರಬರಾಜು ಮಾಡುವ 950 ಮಿ.ಮೀ. ಎಂ.ಎಸ್ ವ್ಯಾಸದ ಕಚ್ಚಾ ನೀರು ಕೊಳವೆ ಮಾರ್ಗ ಹಾಗೂ 750 ಮಿ.ಮೀ. ಎಂ.ಎಸ್ ವ್ಯಾಸದ ಶುದ್ಧ ನೀರಿನ ಕೊಳವೆ ಮಾರ್ಗದಲ್ಲಿ ಪೈಪಲೈನ್ ಸೋರಿಕೆಯಾಗುತ್ತಿದ್ದು,
ಪೈಪಲೈನ್ ದುರಸ್ಥಿ ಕಾರ್ಯ ತುರ್ತಾಗಿ ಕೈಗೊಳ್ಳ ಬೇಕಾಗಿರುವುದರಿಂದ ಆಗಸ್ಟ್ 22 ರಂದು ಧಾರವಾಡ ನಗರದ ಎಲ್ಲ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ವಿಳಂಬವಾಗಿ ನೀರು ಪೂರೈಕೆ ಮಾಡಲಾಗುವುದರಿಂದ ಸಾರ್ವಜನಿಕರು ಸಹಕರಿಸು ವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..