ಧಾರವಾಡ –
ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ದ ಧಾರವಾಡ ಸಂಚಾರಿ ಪೊಲೀಸರು ದಿಟ್ಟ ಕ್ರಮವನ್ನು ಕೈಗೊಂಡಿ ದ್ದಾರೆ.ಹೌದು ಧಾರವಾಢದಲ್ಲಿ ವ್ಹೀಲಿಂಗ್ ಮಾಡುತ್ತಿ ದ್ದವರ ಮೇಲೆ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಮತ್ತು ಟೀಮ್ ಕ್ರಮವನ್ನು ಕೈಗೊಂಡಿದ್ದಾರೆ.
ವಿಶೇಷವೆಂದರೆ ಈ ವ್ಹೀಲಿಂಗ್ ಮಾಡುತ್ತಿದ್ದವರಲ್ಲಿ ಒಬ್ಬಳು ಯುವತಿಯಾಗಿದ್ದು.ವ್ಹೀಲಿಂಗ್ ಮಾಡಲು ಉಪಯೋಗಿಸುತ್ತಿದ್ದ KTM Duke -250 ಮತ್ತು ಇನ್ನೊಂದು ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ
ವ್ಹೀಲಿಂಗ್ ಮಾಡುತ್ತಿದ್ದ ಕೋಮಲ್ ಎಂಬ ಯುವತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಯುವತಿಯ ಜೊತೆಯಲ್ಲಿ ವ್ಹೀಲಿಂಗ್ ನಲ್ಲಿ ತೊಡಗಿದ್ದ ಪ್ರಜ್ವಲ್ ಯುವಕನ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳ ಲಾಗಿದೆ.
ಪ್ರಜ್ವಲ್ ಎಂಬ ಯುವಕನ ಬೈಕ್ KTM Duke-350 ಇದನ್ನೂ ಸಹ ವಶಕ್ಕೆ ಪಡೆದುಕೊಂಡಿದ್ದು ಕಾನೂನು ಕ್ರಮ ಕೈಗೊಳ್ಳಲಾಗಿದೆ.ಈ ಒಂದು ಕಾರ್ಯಾಚರಣೆ ಯಲ್ಲಿ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ,ಅವರೊಂದಿಗೆ ಸಿಬ್ಬಂದಿ ಗಳಾದ ಮಲ್ಲೆಶ ಲಮಾಣಿ,ಅಸ್ಪಾಕಾಲಿ ಬಡಕಾಶಪ್ಪನವರ,ಕುಮಾರಿ ರೇಣುಕಾ,ಸೇರಿದಂತೆ ಹಲವರು ಉಪಸ್ಥಿತರಿದ್ದರು.ಧಾರವಾಡ ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..