ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಗಣಪತಿ ವಿಸರ್ಜನೆಗಾಗಿ ರವಿವಾರ ವಾಹನಗಳ ಮಾರ್ಗ ಬದಲಾವಣೆ – ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಾಹನಗಳ ಮಾರ್ಗ ಸಂಚಾರ ಬದಲಾವಣೆ….. ಹುಬ್ಬಳ್ಳಿಗೆ ಬರುವ ಹೋಗುವ ವಾಹನ ಸವಾರರೇ ಗಮನಿಸಿ
ಗಣಪತಿಯ 9ನೇ ದಿನದ ವಿಸರ್ಜನೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಯನ್ನು ಮಾಡಲಾಗಿದೆ.ಹೌದು ನಗರದಲ್ಲಿ 9ನೇ ದಿನದ ಗಣಪತಿ ವಿಸರ್ಜನೆ ಹಿನ್ನಲೆಯಲ್ಲಿ ಮೆರವಣಿಗೆಯಿಂ ದಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಸಂಚಾರ ಅಸ್ತವ್ಯಸ್ಥತೆ ಆಗಬಾರದು ಎಂಬ ಕಾರಣಕ್ಕಾಗಿ ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆಯನ್ನು ಪೊಲೀಸ್ ಇಲಾಖೆ ಮಾಡಿದೆ.
ನಗರದಲ್ಲಿ 50 ಕ್ಕೂ ಹೆಚ್ಚು 9ನೇ ದಿನದ ಗಣಪತಿಗಳು ವಿಸರ್ಜನೆಯಾಗಲಿದ್ದು ಹೀಗಾಗಿ ಮೆರವಣಿಗೆಯಿಂದಾಗಿ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಾಹನಗಳ ಸಂಚಾರವನ್ನು ಬದಲಾವಣೆ ಮಾಡ ಲಾಗಿದ್ದು ಮಾರ್ಗ ಬದಲಾವಣೆಯ ಸಂಚಾರದ ಮಾರ್ಗವನ್ನು ಕೂಡಾ ಬಿಡುಗಡೆ ಮಾಡಲಾಗಿದೆ.
ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಸಮಸ್ಯೆ ಆಗದಂತೆಯೂ ಕೂಡಾ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದ್ದು ಒಂದು ಕಡೆಗೆ ಪೊಲೀಸ್ ಭದ್ರತೆ ಮತ್ತೊಂದೆಡೆ ಸುಗಮ ಸಂಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೂಡಾ ಮಾಡಿಕೊಂ ಡಿದ್ದು ಸಾರ್ವಜನಿಕರು ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ ವರೆಗೆ ಈ ಒಂದು ಮಾರ್ಗ ಬದಲಾವಣೆಯ ನಿಮಯಗಳನ್ನು ಪಾಲಿಸಲು ಪೊಲೀಸ್ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ.
ಹುಬ್ಬಳ್ಳಿಯಿಂದ ಹೊರಗೆ ಹೋಗುವ ಹೊರಗಿನಿಂದ ಹುಬ್ಬಳ್ಳಿಗೆ ಬರುವ ವಾಹನಗಳ ಮಾರ್ಗವನ್ನು ಸೂಚಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……