ಧಾರವಾಡ –
ಇಂದು ಮಧ್ಯಾಹ್ನ ಧಾರವಾಡದಲ್ಲಿ ಚಿಗರಿ ಹೈವೊಲ್ಟೇಜ್ ಸಭೆ – ಚಿಗರಿ ಕುರಿತಂತೆ ನಿರ್ಧಾರವಾಗಲಿದೆ ಭವಿಷ್ಯ ಜಿಲ್ಲೆಯ ಜನಪ್ರತಿನಿಧಿಗಳು ಭಾಗಿ…..DC ಯವರ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ನಡೆಯಲಿ ಚರ್ಚ
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿರು ಚಿಗರಿ ಬಸ್ ಕುರಿತಂತೆ ಧಾರವಾಡ ಜಿಲ್ಲಾಧಿಕಾರಿಗಳು ಮಹತ್ವದ ಸಭೆಯನ್ನು ಕರೆದಿದ್ದಾರೆ.ಹೌದು ಅವಳಿ ನಗರದ ಮಧ್ಯೆ ಇರುವ ಈ ಒಂದು ಸಾರಿಗೆ ವ್ಯವಸ್ಥೆ ಕುರಿತಂತೆ ಸಾರ್ವಜನಿಕರಿಂದ ಕೆಲವೊಂದಿಷ್ಟು ದೂರು ಗಳು ಪ್ರತಿಭಟನೆ ಕಂಡು ಬಂದ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ತಗೆದುಕೊಂಡಿರುವ ಜಿಲ್ಲೆಯ ಜನಪ್ರತಿನಿ ಧಿಗಳು ಸಭೆಯನ್ನು ಕರೆಯುುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.
ಹೀಗಾಗಿ ಸಧ್ಯ ಜಿಲ್ಲಾಧಿಕಾರಿಗಳು ಚಿಗರಿ ಸಾರಿಗೆ ಕುರಿತಂತೆ ಚರ್ಚೆ ಮಾಡಲು ಮಹತ್ವದ ಸಭೆಯನ್ನು ಕರೆದಿದ್ದಾರೆ.ಧಾರವಾಡದಲ್ಲಿ ಮಧ್ಯಾಹ್ನ 3 ಗಂಟೆಗೆ ಈ ಒಂದು ಸಭೆಯನ್ನು ನಗರದ ಕರ್ನಾಟಕ ವಿಶ್ವವಿದ್ಯಾ ಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಸೇರಿದಂತೆ ಜಿಲ್ಲೆಯ ಶಾಸಕರು ಅಧಿಕಾರಿಗಳು ಪಾಲ್ಗೊಳ್ಳಲಿದ್ದು
ಬಿಆರ್ ಟಿಎಸ್ ಯೋಜನೆ ಸುಧಾರಣೆಯ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳುತ್ತಾರೆ ಏನೇನು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ಬದಲಾವಣೆ ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಾ ಗಿದ್ದು ಇನ್ನೂ ಇದರೊಂದಿಗೆ ಡ್ರೈವರ್ ಗಳ ಜೀವವನ್ನು ಹಿಂಡುತ್ತಿರುವ ಡಿಸಿ ಸಿದ್ದಲಿಂಗಯ್ಯ ಅವರ ಕಾರ್ಯ ವೈಖರಿ ಕುರಿತಂತೆ ಕೂಡಾ ಸುದ್ದಿ ಸಂತೆ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ಕೂಡಾ ಮಾಡಲಿದ್ದು ಈ ಕುರಿತಂತೆ ಚರ್ಚೆ ನಡೆಯಲಿದೆ.ಒಟ್ಟಾರೆ ಚಿಗರಿ ಬಸ್ ಭವಿಷ್ಯ ಏನಾಗಲಿದೆ ಎಂಬೊದಕ್ಕೆ ನಾಳೆಯ ಸಭೆಯಲ್ಲಿ ಉತ್ತರ ಸಿಗಲಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……