ಧಾರವಾಡ –
ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡ ಧಾರವಾಡ ಸರಸ್ವತಿ,ದುರ್ಗಾ ನಿವಾಸ ಟೀಮ್ – ಸುಧಾಕರ ದೇವಾಡಿಗ ನೇತ್ರತ್ವದಲ್ಲಿನ ಟೀಮ್ ಮೊದಲ ಬಾರಿಗೆ ಚಾಂಪಿಯನ್ – ಸರಸ್ವತಿ ಗ್ರೂಪ್ ಮ್ಯಾನೇಜ್ಮೆಂಟ್ ಮಾಲೀಕರಾದ ದಿನಕರ ಕಾಮತ ಪ್ರತಾಪ್ ಕಾಮತ, ಅನಂತ ಶಂಕರ ಕಾಮತ ರಿಂದ ತಂಡಕ್ಕೆ ಶುಭ ಹಾರೈಕೆ.
ಧಾರವಾಡದಲ್ಲಿ ಹೊಟೇಲ್ ಮಾಲೀಕರು,ಕಾರ್ಮಿಕರ ಮತ್ತು ದಿವಂಗತ ಅಕ್ಕಮ್ಮ ಶೆಟ್ಟಿ ಸ್ಮರಣಾರ್ಥ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿಯಲ್ಲಿ ಧಾರವಾಡ ಸರಸ್ವತಿ,ದುರ್ಗಾ ನಿವಾಸ ಟೀಮ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಹೌದು ಪ್ರತಿ ವರ್ಷ ದಂತೆ ಈ ವರ್ಷವೂ ಕೂಡಾ ಧಾರವಾಡದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ,ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀಯವರ ಜಯಂತಿ ಅಂಗವಾಗಿ ಹಾಗೂ ದಿವಂಗತ ಅಕ್ಕಮ್ಮ ಶೆಟ್ಟಿ ಸ್ಮರಣಾರ್ಥ ಹೊನಲು ಬೆಳಕಿನ 30 ಯಾರ್ಡ್ ಚುಟುಕು ಕ್ರಿಕೆಟ್ ಪಂದ್ಯಾವಳಿಯನ್ನು ಧಾರವಾಡದ ಕೆಸಿಡಿ ಮೈದಾನದಲ್ಲಿ ಹಮ್ಮಿಕೊಳ್ಳಲಾ ಗಿತ್ತು
ಕಾರ್ಮಿಕ ಸಚಿವ ಸಂತೋಷ ಲಾಡ್ ಈ ಒಂದು ಪಂದ್ಯಾವಳಿಗೆ ಚಾಲನೆಯನ್ನು ನೀಡಿದ್ದರು ಇನ್ನೂ ಈ ಒಂದು ಪಂದ್ಯಾವಳಿಯಲ್ಲಿ ನಗರದ ಹೊಟೇಲ್ ಮಾಲೀಕರ ಸಂಘದಿಂದ ಮತ್ತು ಕಾರ್ಮಿಕರ ಸಂಘ ದಿಂದ ಒಟ್ಟು 20 ಕ್ಕೂ ಹೆಚ್ಚು ಟೀಮ್ ಗಳು ಪಾಲ್ಗೊಂಡಿದ್ದು ಹೊನಲು ಬೆಳಕಿನಲ್ಲಿ ಪಂದ್ಯಾವಳಿ ಯಲ್ಲಿ ಪ್ರಶಸ್ಸಿಗಾಗಿ ಸೆಣಸಾಡಿದ್ದವು ಅಂತಿಮವಾಗಿ ಈವರೆಗೆ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಳ್ಳು ತ್ತಿದ್ದ ಧಾರವಾಡದ ಸರಸ್ವತಿ.ದುರ್ಗಾ ನಿವಾಸ ಟೀಮ್ ಈವರ್ಷ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂ ಡಿತು.
ಅಂತಿಮ ಪಂದ್ಯದಲ್ಲಿ ಎದುರಾಗಿ ಓಝೋನ್ ಟೀಮ್ ಬಗ್ಗು ಬಡಿದು ಮೊದಲ ಬಾರಿಗೆ ಚಾಂಪಿಯನ್ ಪ್ರಶಸ್ತಿ ಯನ್ನು ಸುಧಾಕರ ದೇವಾಡಿಗ ಟೀಮ್ ಪಡೆದುಕೊಂಡು ಐತಿಹಾಸಿಕ ಸಾಧನೆಯನ್ನು ಮಾಡಿತು.ಇನ್ನೂ ಇದೇ ವೇಳೆ ವಿಜೇತ ತಂಡಕ್ಕೆ ಉಧ್ಯಮಿ ಮಹೇಶ್ ಶೆಟ್ಟಿ ಸೇರಿದಂತೆ ಹಲವರು ಪ್ರಶಸ್ತಿಯನ್ನು ನೀಡಿ ಗೌರವಿಸಿ ದರು.ಚಾಂಪಿಯನ್ ಪಟ್ಟವನ್ನು ಪಡೆದುಕೊಂಡ ಸರಸ್ವತಿ ದುರ್ಗಾ ನಿವಾಸ ಟೀಮ್ ನಲ್ಲಿ ಸುಧಾಕರ ದೇವಾಡಿಗ.ಅರುಣ ದೇವಾಡಿಗ,ಸಚಿನ ದೇವಾಡಿಗ. ವಸಂತ ದೇವಾಡಿಗ.ನಾಗರಾಜ ಗಿಳಿಯಾರ.ಸಚಿನ ಕೋಟೆಶ್ವರ.ಗಣೇಶ ಕುಂದಾಪುರ.ನಿತೀಶ್ ಕುಂದಾಪುರ. ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇತ್ತ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೆ ಹಾಕಿಕೊಂಡ ತಂಡಕ್ಕೆ
ಸರಸ್ವತಿ ಗ್ರೂಪ್ ಮ್ಯಾನೇಜ್ಮೆಂಟ್ ಮಾಲೀಕರಾದ ದಿನಕರ ಕಾಮತ, ಪ್ರತಾಪ್ ಕಾಮತ,ಅನಂತ ಶಂಕರ ಕಾಮತ ಇವರ ಮಾರ್ಗದರ್ಶನ ಲ್ಲಿಆಡಿ ಚಾಂಪಿಯನ್ ಆದ ತಂಡಕ್ಕೆ ಶುಭ ಹಾರೈಸಲಾಯಿತು.ಇನ್ನೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಧ್ಯಮಿ ಮಹೇಶ್ ಶೆಟ್ಟಿ ಅವರೊಂದಿಗೆ ಹೊಟೇಲ್ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಉಪಾಧ್ಯಕ್ಷ ಚಂದ್ರು ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ,ಖಜಾಂಚಿ ಶ್ರೀಧರ ಶೆಟ್ಟಿ,
ಸಹಕಾರ್ಯದರ್ಶಿ ರಾಘು ಶೆಟ್ಟಿ,ಅಶೋಕ ಶೆಟ್ಟಿ,ಶರತ್ ಶೆಟ್ಟಿ,ವಿಜಯಾನಂದ ಶೆಟ್ಟಿ,ಗಿರೀಶ್ ಶೆಟ್ಟಿ,ಸಂತೋಷ ಶೆಟ್ಟಿ,ರಾಜೇಂದ್ರ ಶೆಟ್ಟಿ,ರತ್ನಾಕರ ಶೆಟ್ಟಿಸೇರಿದಂತೆ ಹೊಟೇಲ್ ಮಾಲೀಕರು ಕಾರ್ಮಿಕರು ಮುಖಂಡರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರ ಮವನ್ನು ಯಶಸ್ವಿಗೊಳಿಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..