ಚಿಕ್ಕಬಳ್ಳಾಪುರ –
ಹುಡುಗಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಭರ್ಜರಿ ಧರ್ಮದೇಟು ನೀಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲಿ ಆಂಧ್ರಪ್ರದೇಶದ ಕೊಡೂರು ಮೂಲದ ಪುಂಡ ಯುವಕರ ಗುಂಪೊಂದು ಯುವತಿಯರಿಗೆ ಚುಡಾಯಿಸಿ ಕಿರುಕುಳ ನೀಡುತ್ತಿದ್ದರಂತೆ.

ಹುಡುಗಿಯರನ್ನು ಕಾಡುತ್ತಿದ್ದ ಎನ್ನಲಾಗಿದ್ದು ಪುಂಡರ ಕಿರಿಕಿರಿಯಿಂದ ರೋಸಿಹೋದ ಸಾರ್ವಜನಿಕರು ಕಾಲೇಜು ಹುಡುಗಿಯನ್ನ ಚುಡಾಯಿಸುತ್ತಿದ್ದಾಗ ಓರ್ವ ಯುವಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬೀದಿ ಕಾಮಣ್ಣನಿಗೆ ಸಖತ್ ಬಿಸಿ ಬಿಸಿ ಕಜ್ಜಾಯ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.ಪದೇ ಪದೇ ಪುಂಡರ ಹಾವಳಿಯಿಂದ ಬೇಸತ್ತಿರುವ ಯುವತಿಯರು ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.